ಬಂಟ್ವಾಳ: ಪ್ರತಿಯೊಬ್ಬರೂ ಆತ್ಮ ಶುದ್ದಿ ಮೂಲಕ ಧಾರ್ಮಿಕ ನಂಬಿಕೆಗೆ ಶ್ರಮಿಸಬೇಕಾಗಿದ್ದು, ನಿಸ್ವಾರ್ಥದಿಂದ ಪರರ ಏಳಿಗೆಗೆ ಶ್ರಮಿಸಬೇಕು ಎಂದು ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹೇಳಿದರು.
ತಾಲ್ಲೂಕಿನ ಕಲ್ಲಡ್ಕ ಮುಹಿಯುದ್ದೀನ್ ಜುಮ್ಮಾ ಮಸೀದಿ ಸ್ವಲಾತ್ ಕಮಿಟಿ ವತಿಯಿಂದ ಶುಕ್ರವಾರ ನಡೆದ ಸ್ವಲಾತ್ ವಾರ್ಷಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
25btl- Kalladka
ಅಡ್ಯಾರ್-ಕಣ್ಣೂರು ಮಸೀದಿ ಮುದರ್ರಿಸ್ ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ಮುತ್ತುಕೋಯ ತಂಙಳ್ ಮತ್ತು ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲು ನೇತೃತ್ವದಲ್ಲಿ ಸ್ವಲಾತ್ ಮಜ್ಲಿಸ್ ನಡೆಯಿತು.
ಗುಡ್ಡೆಅಂಗಡಿ ಖತೀಬ ಅಬ್ದುಲ್ ಕರೀಂ ಫೈಝಿ ಮುಖ್ಯ ಭಾಷಣ ಮಾಡಿದರು. ಕಲ್ಲಡ್ಕ ಮಸೀದಿ ಅಧ್ಯಕ್ಷ ಜಿ. ಅಬೂಬಕ್ಕರ್ ಗೋಳ್ತಮಜಲು, ಕಾರ್ಯದರ್ಶಿ ಹಾಜಿ ಅಬ್ದುಲ್ ಹಮೀದ್ ಗೋಲ್ಡನ್, ಕೋಶಾಧಿಕಾರಿ ಹುಸೈನ್ ಸೂರಜ್, ಕೆ.ಸಿ.ರೋಡು ಮಸೀದಿ ಅಧ್ಯಕ್ಷ ಕೆ.ಎಸ್. ಇಸ್ಮಾಯಿಲ್ ಕಲ್ಲಡ್ಕ, ಖತೀಬ ಹೈದರ್ ದಾರಿಮಿ, ಗೋಳ್ತಮಜಲು ಮಸೀದಿ ಅಧ್ಯಕ್ಷ ಯೂಸುಫ್, ಖತೀಬ ಅಶ್ರಫ್ ಮಿಸ್ಬಾಹಿ, ಶಂಸುಲ್ ಉಲಮಾ ಕ್ರಿಯಾ ಸಮಿತಿ ಗೌರವಾಧ್ಯಕ್ಷ ಅಹ್ಮದ್ ಯೂಸುಫ್, ಮದ್ರಸ ಶಿಕ್ಷಕ ಬಿ.ಟಿ. ಇಕ್ಬಾಲ್ ದಾರಿಮಿ, ಎಸ್‍ಕೆಎಸ್‍ಎಸ್‍ಎಫ್ ಕಲ್ಲಡ್ಕ ಶಾಖಾಧ್ಯಕ್ಷ ಕೆ.ಎಸ್. ಫಾರೂಕ್, ಕಾರ್ಯದರ್ಶಿ ಶಹೀದ್ ಗೋಳ್ತಮಜಲು ಮತ್ತಿತರರು ಶುಭ ಹಾರೈಸಿದರು.
ಕಲ್ಲಡ್ಕ ಎಜೆಎಂ ಮುದರ್ರಿಸ್ ಕೆ.ಎಸ್. ಹೈದರ್ ದಾರಿಮಿ ಸ್ವಾಗತಿಸಿ, ವಂದಿಸಿದರು.
ಇದೇ ವೇಳೆ ಕೇರಳ-ವಯಗೂರು ಮುಹಮ್ಮದ್ ಬಾಖವಿ ಮತ್ತು ಅಬೂಬಕ್ಕರ್ ಹುದವಿ ಮುಂಡಂಪರಂಬ್-ಎರ್ನಾಕುಳಂ ಅವರಿಂದ ಎರಡು ದಿನಗಳ ಧಾರ್ಮಿಕ ಉಪನ್ಯಾಸ ನಡೆಯಿತು.

By suddi9

Leave a Reply

Your email address will not be published. Required fields are marked *