ಕೈಕಂಬ: ಜ.14: ಗಂಜಿಮಠ ಮಹಾಗಣಪತಿ ದೇವಸ್ಥಾನದ ಎದುರು ಸೋಮವಾರ ರಾತ್ರಿ ಬೈಕ್ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಪಾದಚಾರಿಯೊಬ್ಬರಿಗೆ ಮಂಗಳವಾರ ಮುಂಜಾನೆ ಮೃತಪಟ್ಟಿದ್ದಾರೆ.
ಗಂಜಿಮಠ ಬಡಗುಳಿಪಾಡಿ ಗ್ರಾಮದ ನಿವಾಸಿ ಪದ್ಮನಾಭ (60) ಮೃತಪಟ್ಟವರು. ಸೋಮವಾರ ರಾತ್ರಿ ಸುಮಾರು 9.30 ವೇಳೆಗೆ ಅವರು ಗಂಜಿಮಠದ ತನ್ನ ಮನೆಯಿಂದ ಒಡ್ಡೂರು ಬಿಗ್ಬ್ಯಾಗ್ ಕಂಪೆನಿಗೆ ರಾತ್ರಿಪಾಳಿ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ಗಂಜಿಮಠ ಮಹಾಗಣಪತಿ ದೇವಸ್ಥಾನದ ಎದುರು ರಸ್ತೆ ದಾಟುತ್ತಿದ್ದ ಸಂದರ್ಭ ಮೂಡುಬಿದರೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡ ಪದ್ಮನಾಭ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮುಂಜಾನೆ ಮೃತಪಟ್ಟರು. ಬೈಕ್ ಸವಾರನಿಗೂ ಗಾಯಗಳಾಗಿವೆ. ಮೃತರಿಗೆ ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
