ಬಂಟ್ವಾಳ: ತಾಲೂಕು ಪಂಚಾಯತ್ ಅಧ್ಯಕ್ಷ ಯಶವಂತ ದೇರಾಜೆ ನೇತೃತ್ವದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಐಡಾ ಸುರೇಶ್, ತಾ.ಪಂ.ಸದಸ್ಯರಾದ ದಿನೇಶ್ ಅಮ್ಟೂರು, ಪದ್ಮಶೇಖರ ಜೈನ್, ಮಾಧವ ಮಾವೆ, ಆನಂದ ಶಂಭೂರು ಹಾಜರಿದ್ದ ನಿಯೋಗ ಸಾರ್ವಜನಿಕ ದೂರಿನ ಮೇರೆಗೆ
ಇಡೀ ತಾಲೂಕಿಗೆ ಒಂದು ಸಂಚಾರಿ ಘಟಕವಿದ್ದರೂ ಇಲ್ಲಿ ಪೂರ್ಣ ಪ್ರಮಾಣದಲ್ಲಿ ಕರ್ತವ್ಯ ನಿರ್ವಹಿಸಲು ವೈದ್ಯಾಧಿಕಾರಿ ಇಲ್ಲ ಎನ್ನುವುದನ್ನಿ ಸಿಬ್ಬಂದಿಗಳು ಜನಪ್ರತಿನಿಧಿಗಳ ಗಮನಕ್ಕೆ ತಂದರು. ಕಾರ್ಯಕ್ಷೇತ್ರಕ್ಕೆ ವೈದ್ಯರು ಹೋಗಬೇಕೆನ್ನುವ ನಿಯಮ ವಿದ್ದರೂ ವೈದ್ಯರ ಕೊರತೆಯಿಂದಾಗಿ ಹಿರಿಯ ಆರೋಗ್ಯ ಸಹಾಯಕಿ, ಪಾರ್ಮಸಿಸ್ಟ್ ಹಾಗೂ ಚಾಲಕ ಮಾತ್ರ ಕಾರ್ಯಕ್ಷೇತ್ರಕ್ಕೆ ಹೋಗುತ್ತಿರುವುದಾಗಿ ತಿಳಿಸಿದರು.
1 (1)
ಇರುವ ನಾಲ್ಕು ಮಂದಿ ಸಿಬ್ಬಂದಿಗಳ ನಡುವೆ ಹೊಂದಾಣಿಯ ಕೊರತೆ ಇರುವುದು ಭೇಟಿಯ ವೇಳೆ ಅನಾವರಣಗೊಂಡಿತು. ಜನಪ್ರತಿನಿಧಿಗಳ ಮುಂದೆಯೇ ಪರಸ್ಪರ ಆರೋಪ ಪ್ರತ್ಯರೋಪ ಮಾಡಿಕೊಳ್ಳುವ ಮೂಲಕ ತಮ್ಮೊಳಗಿನ ವೈಷಮ್ಯವನ್ನು ಬಹಿರಂಗಪಡಿಸಿದರು.
ಸಂಚಾರಿ ಘಟಕದ ಕಚೇರಿಗೆ ನೀರಿನ ಸಂಪರ್ಕ ಇಲ್ಲ, ಸ್ಥಿರ ದೂರವಾಣಿವಾಣಿ ಸಂಪರ್ಕ ವ್ಯವಸ್ಥೆ ಇಲ್ಲ, ಶೆಡ್ಗೆ ಬೀಗ ಇಲ್ಲ, ಸಿಬ್ಬಂದಿಗಳಿಗೆ ಒದಗಿಸಲಾಗಿರುವ ವಸತಿಗೃಹ ವ್ಯವಸ್ಥಿತವಾಗಿಲ್ಲ ಮಳೆಗಾಲದಲ್ಲಿ ನೀರು ಸೋರಿಕೆಯಾಗುತ್ತದೆ. ಇಲಾಖೆಗೆ ಸಂಬಂಧಪಟ್ಟಂತೆ ದೂರವಾಣಿ ಕರೆ ಮಾಡಬೇಕಿದ್ದರೆ ಸ್ವಂತ ಮೊಬೈಲ್ ಪೋನನ್ನು ಬಳಸಿಕೊಳ್ಳಬೇಕು ಎಂದರು. ನಿಯೋಘದಲ್ಲಿದ್ದ ಸದಸ್ಯರು ವಸತಿಗೃಹವನ್ನು ವೀಕ್ಷಿಸಿದರು.

By suddi9

Leave a Reply

Your email address will not be published. Required fields are marked *