ಬಂಟ್ವಾಳ: ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಕೃಷಿಭೂಮಿ ಸಂರಕ್ಷಣಾ ಯೋಜನೆಯಡಿ 5 ಲಕ್ಷ ವೆಚ್ಚದಲ್ಲಿ ಸಣ್ಣಕುಕ್ಕು ಎಂಬಲ್ಲಿ ನಿರ್ಮಾಣಗೊಳ್ಳಲಿರುವ ತಡೆಗೋಡೆ ನಿರ್ಮಾಣಕ್ಕೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಬುಧವಾರ ಶಂಕುಸ್ಥಾಪನೆ ನೆರವೇರಿಸಿದರು.

ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅಬ್ಬಾಸ್ ಆಲಿ, ವಲಯಾಧ್ಯಕ್ಷ ಚಂದ್ರಶೇಖರ ಪೂಜಾರಿ ಕೋರ್ಯ, ಕಾರ್ಯದರ್ಶಿ ಬಿ.ಜನಾರ್ಧನ್, ಗ್ರಾ.ಪಂ.ಸದಸ್ಯ ಕೃಷ್ಣಪ್ಪ ಪೂಜಾರಿ, ಇಲಾಖೆಯ ಇಂಜಿನಿಯರ್ ಷಣ್ಮುಗಂ, ಸಹಾಯಕ ಇಂಜಿನಿಯರ್ ಶಿವಪ್ರಸನ್ನ ಉಪಸ್ಥಿತರಿದ್ದರು.
