ಬಂಟ್ವಾಳ: ಕಡೇಶ್ವಾಲ್ಯ ಗ್ರಾಮದಲ್ಲಿ 5 ಲಕ್ಷ ವೆಚ್ಚದ ಸೂರಂಗೋಲು-ನಚ್ಚಬೆಟ್ಟು ರಸ್ತೆಯ ಡಾಮರೀಕರಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಬುಧವಾರ ಶಂಕುಸ್ಥಾಪನೆ ನೆರವೇರಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅಬ್ಬಾಸ್ ಆಲಿ, ಗ್ರಾ.ಪಂ ಸದಸ್ಯರಾದ ಶೀನನಾಯ್ಕ, ವಿಜಯಕುಮಾರ್, ಹರಿಶ್ಚಂದ್ರಭಂಡಾರಿ . ನ್ಯಾಯವಾದಿ ಚಿದಾನಂದ , ಈಶ್ವರ ಪೂಜಾರಿ ಇರ್ತಡ್ಕ, ಆದಂ ಎನ್, ಇಬ್ರಾಹಿಂ ನಕ್ಕೆಬೆಟ್ಟು, ಹುಸೈನ್ ವಳಚ್ಚಿಲ್ ಮೊದಲಾದವರು ಉಪಸ್ಥಿತರಿದ್ದರು.

