ಬಂಟ್ವಾಳ : ಅಲ್ಲಾಹನ ಇಷ್ಟದಾಸರೊಂದಿಗೆ ಸ್ನೇಹ ಅದು ವ್ಯಕ್ತಿಯ ಇಹ-ಪರ ವಿಜಯಕ್ಕೆ ಕಾರಣ ಎಂದು ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಉಪಾಧ್ಯಕ್ಷರಾದ ಶೈಖುನಾ ಎಂ.ಟಿ. ಅಬ್ದುಲ್ಲ ಮುಸ್ಲಿಯಾರ್ ಹೇಳಿದರು.
ಬಂಟ್ವಾಳ ಜುಮಾ ಮಸೀದಿ ಸಮೀಪ ಅಂತ್ಯವಿಶ್ರಮ ಹೊಂದುತ್ತಿರುವ ಸಯ್ಯಿದ್ ಮಸ್ತಾನ್ ಕೋಯ ತಂಙಳ್ ಹಾಗೂ ಸಯ್ಯಿದತ್ ಸಖಾಫಿಯಾ ಬೀವಿಯವರ ಹೆಸರಿನಲ್ಲಿ ಶನಿವಾರ ರಾತ್ರಿ ನಡೆದ ಬಂಟ್ವಾಳ ಮಖಾಂ ಉರೂಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪವಾಡ ಪುರುಷರ ವಾರ್ಷಿಕ ಅನುಸ್ಮರಣೆಗೆ ಇಸ್ಲಾಮಿನಲ್ಲಿ ಸಾಕಷ್ಟು ಪುರಾವೆಗಳಿದ್ದು, ಸುನ್ನತ್ ಜಮಾಅತ್ನ ಆಶಯಾದರ್ಶಗಳಲ್ಲಿ ಒಂದಾಗಿರುವ ಇದನ್ನು ಪೂರ್ವಿಕ ಮಹಾತ್ಮರು ಹಿಂದಿನಿಂದಲೂ ಅಳವಡಿಸಿಕೊಂಡು ಬಂದಿದ್ದಾರೆ. ಈ ಬಗ್ಗೆ ಯಾವುದೇ ನೂತನವಾದಗಳಿಗೆ ಸುನ್ನಿಗಳು ಕಿವಿಗೊಡುವ ಅಗತ್ಯವಿಲ್ಲ ಎಂದರು.

ಮುಖ್ಯ ಭಾಷಣಗೈದ ಎಸ್ಕೆಎಸ್ಎಸ್ಎಫ್ ಮುಖಂಡ ಮುಹಮ್ಮದ್ ರಾಮಂದಳಿ ಮಾತನಾಡಿ ಆಧುನಿಕ ಜೀವನದ ಅಂಗವಾಗಿರುವ ಸಾಮಾಜಿಕ ತಾಣಗಳನ್ನೂ ಕೂಡಾ ಯುವ ಜನತೆ ನೈತಿಕತೆಯ ಪರಿಧಿಯಲ್ಲಿ ಉಪಯೋಗಿಸಿದರೆ ಅದರಿಂದಲೂ ಪುಣ್ಯ ಸಂಪಾದಿಸಲು ಸಾಧ್ಯವಿದೆ ಎಂದರು.
ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಕೆ.ಪಿ. ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲು ದುವಾಶಿರ್ವಚನಗೈದರು. ಸ್ಥಳೀಯ ಮಸೀದಿ ಮುದರ್ರಿಸ್ ಹಾಜಿ ಮುಹಮ್ಮದ್ ಹನೀಫ್ ದಾರಿಮಿ, ಅಧ್ಯಕ್ಷ ಬಿ. ಅಬ್ದುಲ್ ಲತೀಫ್, ಕಾರ್ಯದರ್ಶಿ ಹಾಜಿ ಇಬ್ರಾಹಿಂ, ಮದ್ರಸ ಮುಖ್ಯೋಪಾಧ್ಯಾಯ ಬಿ.ಕೆ. ಯೂಸುಫ್ ಮುಸ್ಲಿಯಾರ್, ಬಂಟ್ವಾಳ ರೇಂಜ್ ಮದ್ರಸ ಮ್ಯಾನೇಜ್ಮೆಂಟ್ ಇದರ ಅಬ್ದುಲ್ ಖಾದರ್ ಮಾಸ್ಟರ್ ಬಂಟ್ವಾಳ, ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ಶಾಖಾಧ್ಯಕ್ಷ ಹಾರೂನ್ ರಶೀದ್ ಬಂಟ್ವಾಳ ಮೊದಲಾದವರು ಉಪಸ್ಥಿತರಿದ್ದರು.
ಉರೂಸ್ ಪ್ರಯುಕ್ತ ಕಳೆದ ಮೂರು ದಿನಗಳಿಂದ ನಡೆದ ಧಾರ್ಮಿಕ ಪ್ರವಚನ ಕಾರ್ಯಕ್ರಮಗಳಲ್ಲಿ ಪಾಣೆಮಂಗಳೂರು-ಗುಡ್ಡೆಅಂಗಡಿ ಖತೀಬ್ ಅಬ್ದುಲ್ ಕರೀಂ ಫೈಝಿ ಕುಂತೂರು, ಕೇರಳ-ಚೆರ್ವತ್ತೂರು ಜುಮಾ ಮಸೀದಿ ಖತೀಬ್ ಇಬ್ರಾಹಿಂ ಖಲೀಲ್ ಹುದವಿ, ಜುನೈದ್ ಸಅದಿ ಕೂಟುಪರಂಬ-ಕೇರಳ ಅವರು ಧಾಮರ್ಿಕ ಉಪನ್ಯಾಸಗೈದರು.
