ಮೂಡುಬಿದರೆ: ಶ್ರೀರಾಮ ಪರಬ್ರಹ್ಮ ಸ್ವರೂಪಿ. ಆತನದು ಪರಿಪೂರ್ಣ ವ್ಯಕ್ತಿತ್ವ ಎಂದು ಹಿರಿಯ ವಿದ್ವಾಂಸ ಡಾ. ಪಾವಗಡ ಪ್ರಕಾಶ ರಾವ್ ಹೇಳಿದರು.
ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನ ಶತಮಾನೋತ್ಸವ ಹಾಗೂ ಬ್ರಹ್ಮಕಲಶೋತ್ಸವ ಸಂದರ್ಭ ಆಯೋಜಿಸಲಾದ ಪ್ರವಚನದಲ್ಲಿ ಗುರುವಾರ `ರಾಮಾಯಣದ ಮಹತ್ವ- ತಾತ್ವಿಕ ಸಿದ್ಧಾಂತ’ ಕುರಿತು ಮಾತನಾಡಿದರು.

mbd_april9_4 (1)

mbd_april9_4 (2)
ರಾಮಾಯಣ ಸರ್ವಶ್ರೇಷ್ಠ ಗ್ರಂಥ:
ಪೂರ್ವದಲ್ಲಿ ಹೋಮ್ಸ್‍ನ ಇಲಿಯೆಟ್ ಮತ್ತು ಒಡಿಸ್ಸಿ ಗ್ರಂಥಗಳೇ ಜಗತ್ತಿನ ಶ್ರೇಷ್ಠ ಗ್ರಂಥಗಳೆಂಬ ಅಭಿಪ್ರಾಯ ಜಾಗತಿಕ ಮಟ್ಟದಲ್ಲಿ ವಿದ್ವತ್‍ವಲಯದಲ್ಲಿತ್ತು. ಆದರೆ, ರಾಮಾಯಣದ ಬಳಿಕ ಈ ಎರಡೂ ಗ್ರಂಥಗಳಿಗಿಂತ ರಾಮಾಯಣವೇ ಸರ್ವಶ್ರೇಷ್ಠ ಗ್ರಂಥವಾಗಿ ವಿದ್ವತ್ ವಲಯ ಜಾಗತಿಕವಾಗಿ ಸಮ್ಮತಿಸಿತು. ಆ ಮೂಲಕ ಭಾರತದ ಪ್ರಥಮ ಮಹಾಕಾವ್ಯ ರಾಮಾಯಣಕ್ಕೆ ಜಾಗತಿಕವಾಗಿ ಮನ್ನಣೆ ಲಭಿಸಿತು ಎಂದರು.
ಶ್ರೀರಾಮಚಂದ್ರ ಮರ್ಯಾದಾಪುರುಷೋತ್ತ. ಸ್ವತಃ ಏಕಪತ್ನೀವ್ರತಸ್ಥನಾಗಿ ಸಾಂಸಾರಿಕ ಮಹತ್ತನ್ನು ಜಗತ್ತಿಗೆ ತಿಳಿಹೇಳಿದವ. ಆತನ ಆದರ್ಶ ಪಾಲಿಸುವುದು ಪ್ರತಿಯೋರ್ವರ ಕರ್ತವ್ಯ ಎಂದರು.
ದೇವಸ್ಥಾನದ ಆಡಳಿತ ಸಮಿತಿ ಸದಸ್ಯ ಶಿವಶಂಕರ ಮಾಯಣ ಸ್ವಾಗತಿಸಿದರು. ಚಂದ್ರಕಾಂತ ಭಟ್ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *