ಬಂಟ್ವಾಳ:ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಸಂಗಬೆಟ್ಟು ರಸ್ತೆಯಲ್ಲಿ ಪಿಕಪ್ ವಾಹನದಲ್ಲಿ ಪ್ಯಾರಗಾನ್ ಚಪ್ಪಲಿ ರಖಂ ಮಾರಾಟಕ್ಕೆ ಸಾಗಾಟ ಮಾಡುತ್ತಿದ್ದ ಇಬ್ಬರಿಗೆ ಯುವಕರ ತಂಡವೊಂದು ಹಲ್ಲೆ ನಡೆಸಿದ ಪ್ರಕರಣ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗುರುವಾರ ದಾಖಲಾಗಿದೆ.
ಮೂಡುಬಿದ್ರೆ ಸಮೀಪದ ಸಂಪಿಗೆ ನಿವಾಸಿಗಳಾದ ಅಬೂಬಕ್ಕರ್ ಮತ್ತು ಇಮ್ರಾನ್ ಎಂಬವರು ಪಿಕಪ್ ವಾಹನದಲ್ಲಿ ಬುಧವಾರ ಸಂಜೆ ಮೂಡುಬಿದ್ರೆ ಕಡೆಗೆ ಹೋಗುತ್ತಿದ್ದ ವೇಳೆ ಇದೇ ರಸ್ತೆಯಲ್ಲಿ ಬೈಕಿನ ಮೂಲಕ ಪ್ರಯಾಣಿಸುತ್ತಿದ್ದ ರಜನೀಶ್ ಮತ್ತು ಕಮಲೇಶ ಎಂಬವರಿಗೆ ದೂಳು ಹಾರಿಸಿದ್ದಾರೆ ಎಂದು ಆರೋಪಿಸಿ ಪಿಕಪ್ ವಾಹನಕ್ಕೆ ತಡೆಯೊಡ್ಡಿ ಅವರಿಗೆ ಹಲ್ಲೆ ನಡೆಸಿದ್ದಾರೆ. ಇದೇ ವೇಳೆ ಸ್ಥಳೀಯ ನಿವಾಸಿಗಳಾದ ಶೇಖರ, ಸಂತೋಷ್, ಅರವಿಂದ, ಪುನೀತ್, ಧನಂಜಯ ಎಂಬವರು ಸೇರಿಕೊಂಡು ಹಲ್ಲೆಗೆ ಸಹಕರಿಸಿದ್ದಾರೆ ಎಂದು ಅಬೂಬಕ್ಕರ್ ಅವರು ಪೊಲೀಸರಿಗೆ ನಿಡಿರುವ ದೂರಿನಲ್ಲಿ ವಿವರಿಸಿದ್ದಾರೆ.
