ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಪುಂಜಾಲಕಟ್ಟೆಯಲ್ಲಿ ಎರಡೆರಡು ಬಾರಿ ಸ್ಥಳೀಯರಿಂದ ಪ್ರತಿಭಟನೆ ಮೂಲಕ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದ ಇಲ್ಲಿನ ಹದಗೆಟ್ಟ ಪುಂಜಾಲಕಟ್ಟೆ-ಬೆರ್ಕಳ ನಾಲ್ಕು ಕಿ.ಮೀ.ರಸ್ತೆಗೆ ಇದೀಗ ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆ ರೂ.2.82ಕೋಟಿ ಮೊತ್ತದ ಕಾಮಗಾರಿಗೆ ಕೊನೆಗೂ ಶಾಸಕ ಕೆ.ವಸಂತ ಬಂಗೇರ ಅವರು ಭಾನುವಾರ ಗುದ್ದಲಿಪೂಜೆ ನೆರವೇರಿಸಿದ್ದಾರೆ.

ಕಳೆದ 1983ರಿಂದ ಬೆಳ್ತಂಗಡಿ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದು, ಕುಗ್ರಾಮಗಳಿಗೆ ರಸ್ತೆ, ವಿದ್ಯುತ್, ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ. ಒಟ್ಟು 81 ಗ್ರಾಮಗಳ ಪೈಕಿ ಎಲ್ಲಾ ಗ್ರಾಮಗಳನ್ನು ಸಮಾನವಾಗಿ ಕಂಡಿದ್ದೇನೆ. ಮಹತ್ವಾಕಾಂಕ್ಷೆಯ ‘ಮಿನಿ ವಿಧಾನ ಸೌಧ’ ನಿಮರ್ಾಣ ಕಾಮಗಾರಿ ತ್ವರಿತವಾಗಿ ಆರಂಭಗೊಳ್ಳಲಿದೆ ಎಂದು ಅವರು ವಿವರಿಸಿದರು.
ಸ್ಥಳೀಯ ಜಿ.ಪಂ.ಸದಸ್ಯೆ ತುಳಸಿ ಜಿ.ಹಾರಬೆ, ತಾ.ಪಂ.ಅಧ್ಯಕ್ಷೆ ಜಯಂತಿ ಪಾಲೇದು, ಸದಸ್ಯ ವಿನ್ಸೆಂಟ್ ಡಿಸೋಜ, ಮಡಂತ್ಯಾರು ಗ್ರಾ.ಪಂ.ಅಧ್ಯಕ್ಷೆ ಸುಶೀಲ ಗಣೇಶ್, ಸದಸ್ಯರಾದ ಶೈಲೇಶ್, ದಿನೇಶ್ ಆಚಾರ್ಯ, ರಿಚಾಡರ್್ ಡಿಸೋಜ, ವನಜ, ಜಯಂತಿ, ಪಿಡಿಒ ನಾಗೇಶ್, ಮಾಜಿ ಅಧ್ಯಕ್ಷರಾದ ನೃಪರಾಜ ಬಂಗೇರ, ತುಂಗ ಗೋಪಾಲ್, ಮಾಲಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್, ಮಂಜಲಪಲ್ಕೆ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ಸಲಾಮ್, ಪ್ರಮುಖರಾದ ರವೀಂದ್ರ ಪೂಜಾರಿ ಮಾಣಿಂಜ, ಪ್ರಶಾಂತ್ ಪುಂಜಾಲಕಟ್ಟೆ, ಲಿಂಗಪ್ಪ ನಾಯಕ್, ರಾಧಾಕೃಷ್ಣ ಭಟ್, ವಿಶ್ವೇಶ್ವರ ಭಟ್, ಅಶೋಕ ಭಟ್, ರಾಜೇಶ್ ಪುಳಿಮಜಲು ಮತ್ತಿತರರು ಉಪಸ್ಥಿತರಿದ್ದರು.
ಗ್ರಾ.ಪಂ.ಸದಸ್ಯ ರಾಜಶೇಖರ ಶೆಟ್ಟಿ ಸ್ವಾಗತಿಸಿ, ವಂದಿಸಿದರು.
