
ದೆಹಲಿ: ಆಧಾರ್ ಕಾರ್ಡ್ ಸಂಬಂಧಿಸಿ ಕೇಂದ್ರ ಸರಕಾರ ಮತ್ತು ಸುಪ್ರೀಂ ಕೋರ್ಟು ನಡುವೆ ನಡೆಯುತ್ತಿರುವ ಹಗ್ಗಜಗ್ಗಾಟ ಮುಂದುವರಿದಿದೆ. ಯಾವುದೇ ಸೇವೆ ಅಥವಾ ಸವಲತ್ತುಗಳನ್ನು ಪಡೆಯಲು ಆಧಾರ್ ಕಾರ್ಡನ್ನು ಈಗಲೂ ಕಡ್ಡಾಯ ಮಾಡಿರುವ ಬಗ್ಗೆ ಕೇಂದ್ರ ಸರಕಾರ ವಿವರಣೆ ನೀಡಬೇಕೆಂದು ಸೋಮವಾರ ಸುಪ್ರೀಂ ಕೋರ್ಟು ಸೂಚಿಸಿದೆ. ಆಧಾರ್ ಕಾರ್ಡ್ ಕಡ್ಡಾಯವೆಂಬ ಯಾವುದೇ ಸೂಚನೆಯಿದ್ದರೆ ಅದನ್ನು ಕೂಡಲೇ ಹಿಂಪಡೆಯಬೇಕೆಂದು ಸುಪ್ರೀಂ ಕೋರ್ಟು ಆದೇಶಿಸಿದೆ. ಅತ್ಯಾಚಾರ ಪ್ರಕರಣವನ್ನು ಪರಿಹರಿಸುವ ಸಲುವಾಗಿ ಜನರು ಆಧಾರ್ ಕಾರ್ಡ್ ನೀಡಿದೆ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂಬ ಬಾಂಬೆ ಹೈಕೋರ್ಟು ಗೋವಾ ಪೀಠವು ನೀಡಿರುವ ಆದೇಶಕ್ಕೆ ತಡೆಹೇರಿದ ಸಂದರ್ಭದಲ್ಲಿ ಸುಪ್ರೀಂ ಕೋರ್ಟು ಈ ಆದೇಶವನ್ನು ಹೊರಡಿಸಿದೆ.

