Dinker_Shettydinakar shetty getpas

ಸುದ್ದಿ 9 ಮಂಗಳೂರು: ಭಾನುವಾರ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ರನ್ನು ಬಿಜೆಪಿ ಪಕ್ಷಕ್ಕೆ ಬರಮಾಡಿಕೊಂಡ ಎರಡು ಗಂಟೆಗಳೊಳಗೆ ಅವರಿಂದ ಪ್ರಾಥಮಿಕ ಸದಸ್ಯತ್ವವನ್ನು ವಾಪಾಸು ಪಡೆದ ಪ್ರಕರಣದ ಬಿಸಿ ಹಾಗೇ ಇರುವಂತೆಯೇ ಕಾಂಗ್ರೆಸ್ ಕೂಡಾ ಅಂಥದ್ದೇ ಫಜೀತಿಗೆ ಸಿಕ್ಕಿಹಾಕಿ ಕೊಂಡ ಘಟನೆ ಸೋಮವಾರ ನಡೆಯಿತು.

Dinker_Shetty
dinakar shetty getpas

ದಿನಕರ ಶೆಟ್ಟಿಯನ್ನು ಕಾಂಗ್ರೆಸ್ ಧುರೀಣರಾದ ಜನಾರ್ದನ ಪೂಜಾರಿ, ಆಸ್ಕರ್ ಫೆನರ್ಾಂಡೀಸ್, ರಮಾನಾಥ ರೈ, ಐವನ್ ಡಿಸೋಜ ಮುಂತಾದವರ ಸಮ್ಮುಖದಲ್ಲಿ ಪಕ್ಷಕ್ಕೆ ಸ್ವಾಗತಿಸಲಾಯಿತು. ಆದರೆ ಶೆಟ್ಟಿ ಶ್ರೀ ರಾಮಸೇನೆಯಲ್ಲಿ ಪಬ್ ದಾಳಿ ವೇಳೆ ಸಕ್ರಿಯರಾಗಿದ್ದರು ಎಂಬ ಮಾಹಿತಿ ಕಾಂಗ್ರೆಸಿಗರ ಕಿವಿಗೆ ಬೀಳುತ್ತಿದ್ದಂತೆ ಅವರ ಸದಸ್ಯತ್ವವನ್ನು ಹಿಂಪಡೆಯಲಾಯಿತು. ಪಬ್ ದಾಳಿ ವೇಳೆ ಶ್ರೀ ರಾಮಸೇನೆಯ ಉಪಾಧ್ಯಕ್ಷರಾಗಿದ್ದ ಪ್ರಸಾದ್ ಅತ್ತಾವರ್ ದಿನಕರ್ ಶೆಟ್ಟಿ ಶ್ರೀ ರಾಮಸೇನೆಯ ಕಾನೂನು ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದರು ಎಂಬ ಅಂಶವನ್ನು ಸ್ಪಷ್ಟಪಡಿಸಿದ್ದರು. ದಿನಕರ್ ಶೆಟ್ಟಿ ಸೇರ್ಪಡೆಗೆ ಕಾಂಗ್ರೆಸ್ನ ಕೆಲ ನಾಯಕರ ತೀವ್ರ ವಿರೋಧವಿತ್ತು. ಶೆಟ್ಟಿ ಮತ್ತು ಶ್ರೀ ರಾಮಸೇನೆ ನಡುವಿನ ಸಂಬಂಧದ ಖುಲಾಸೆಯ ನಂತರ ಕಾಂಗ್ರೆಸ್ ಅವರಿಗೆ ಗೇಟ್ಪಾಸ್ ನೀಡಿದ

By suddi9

Leave a Reply

Your email address will not be published. Required fields are marked *