lovers suicide

ಸುದ್ದಿ 9ಮಂಗಳೂರು: ಪರೀಕ್ಷೆಯಲ್ಲಿ ಅಂಕ ಕಡಿಮೆ ಬರಬಹುದು ಎಂಬ ಭಯದಲ್ಲಿ ಎಳೆಜೋಡಿಯೊಂದು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಲು ಯತ್ನಿಸಿ ಯುವತಿ ಸುರಕ್ಷಿತವಾಗಿ ಮನೆಗೆ ಹಿಂತಿರುಗಿದರೆ ಯುವಕನ ಇನ್ನೂ ಪತ್ತೆಯಾಗಿಲ್ಲ.

lovers suicide
lovers suicide

ಗೋಕರ್ಣನಾಥ ಕಾಲೇಜಿನಲ್ಲಿ ಮೊದಲ ವರ್ಷದ ಪಿಯುಸಿ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಪುನೀತ್ ಕುಮಾರ್(17) ಎಂಬಾತ ಅದೇ ಕ್ಲಾಸಿನ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಈ ಮಧ್ಯೆ ಪರೀಕ್ಷೆಯಲ್ಲಿ ಒಂದು ವಿಷಯದಲ್ಲಿ ಕಡಿಮೆ ಅಂಕ ಬರಬಹುದು ಎಂಬ ಭಯ ಪುನೀತ್ನನ್ನು ಕಾಡುತ್ತಿತ್ತು. ಇದರಿಂದ ಚಿಂತಿತನಾದ ಪುನೀತ್ ಮತ್ತಾತನ ಗೆಳತಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಭಾನುವಾರ ಬೆಳಿಗ್ಗೆ ತಿಂಡಿ ಮುಗಿಸಿ ಮನೆಯಿಂದ ಹೊರಟ ಪುನೀತ್ ನಂತರ ಮನೆಗೆ ವಾಪಾಸಾಗಿರಲಿಲ್ಲ. ಸೋಮವಾರ ಬೆಳಿಗ್ಗೆ ಇವರಿಬ್ಬರೂ ಮಂಗಳೂರಿನ ಪಣಂಬೂರು ಬಳಿ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಘಟನೆಯಲ್ಲಿ ಯುವತಿಯು ಸುರಕ್ಷಿತವಾಗಿ ಬದುಕುಳಿದರೆ ಯುವಕ ಮಾತ್ರ ನಾಪತ್ತೆಯಾಗಿದ್ದಾನೆ. ಸತತ ಎರಡು ಗಂಟೆಗಳ ಕಾಲ ನೀರಿನಲ್ಲಿ ಮುಳುಗೆದ್ದಿದ್ದರೂ ತಾನು ಪವಾಡ ಸದೃಶ ಬದುಕಿ ಬಂದಿರುವುದಾಗಿ ಯುವತಿ ತಿಳಿಸಿದ್ದಾಳೆ. ಪುನೀತ್ನ ತಂದೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ಯುವತಿ ನೀಡಿದ ಮಾಹಿತಿಯನ್ವಯ ಪೊಲೀಸರು ಪುನೀತ್ ಪತ್ತೆಗೆ ಮುಂದಾಗಿದ್ದಾರೆ. ಘಟನೆಯ ನೈಜ ಸತ್ಯಂಶ ಇನ್ನಷ್ಟೇ ಬಯಲಾಗಬೇಕಾಗಿದೆ

By suddi9

Leave a Reply

Your email address will not be published. Required fields are marked *