ಬಂಟ್ವಾಳ : ಬೆಳ್ತಂಗಡಿ ತಾಲೂಕು ಬಜಿರೆ ಯುವಶಕ್ತಿ ಫ್ರೆಂಡ್ಸ್ ಕ್ಲಬ್ ಇದರ ಆಶ್ರಯದಲ್ಲಿ ದ.ಕ.ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇದರ ಸಹಭಾಗಿತ್ವದಲ್ಲಿ ದ.ಕ.ಉಡುಪಿ ಹಾಗೂ ಕಾಸರಗೋಡು ಅಂತರ್ ಜಿಲ್ಲಾ ಮಟ್ಟದ ಪುರುಷರ ಮುಕ್ತ ಮತ್ತು 58 ಕೆ.ಜಿ.ವಿಭಾಗದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಯುವಶಕ್ತಿ ಟ್ರೋಫಿ-2015 ಬಜಿರೆ ಸ.ಹಿ.ಪ್ರಾ.ಶಾಲಾ ವಠಾರದಲ್ಲಿ ಎ.4ರಂದು ಶನಿವಾರ ಜರಗಲಿದೆ.
ಅರಣ್ಯ ಸಚಿವ ಬಿ.ರಮಾನಾಥ ರೈ ಅವರು ಪಂದ್ಯಾಟವನ್ನು ಉದ್ಘಾಟಿಸಲಿರುವರು. ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ಅವರು ಅಧ್ಯಕ್ಷತೆ ವಹಿಸಲಿರುವರು. ಜಿ.ಪಂ.ಮಾಜಿ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಅವರು ಕ್ರೀಡಾಂಗಣವನ್ನು ಉದ್ಘಾಟಿಸಲಿರುವರು. ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ , ಉದ್ಯಮಿಗಳಾದ ತಿಮ್ಮಪ್ಪ ನಾಕ್ ನಡಿಗುತ್ತು , ರಂಜನ್ ಗೌಡ ಬೆಳ್ತಂಗಡಿ, ಕಾವಳಮೂಡೂರು ತಾ.ಪಂ.ಸದಸ್ಯ ಬಿ.ಪದ್ಮಶೇಖರ ಜೈನ್, ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್, ಬೆಳ್ತಂಗಡಿ ಎಪಿಎಂಸಿ ಅಧ್ಯಕ್ಷ ಧರಣೇಂದ್ರ ಕುಮಾರ್, ಅಂಡಿಂಜೆ ತಾ.ಪಂ.ಸದಸ್ಯ ಕೆ.ವಿಜಯ ಗೌಡ ಮತ್ತಿತರರು ಭಾಗವಹಿಸಲಿರುವರು. ಸಂಜೆ 7ರಿಂದ ಥಂಡರ್ಗೈಸ್ ಬಜಪೆ ತಂಡದವರಿಂದ ನೃತ್ಯ ಕಲಾ ವೈಭವ ಪ್ರದರ್ಶನವಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂಖ್ಯೆ: 9449244897, 9448914361ನ್ನು ಸಂಪರ್ಕಿಸಬೇಕಾಗಿ ಗೌರವಾಧ್ಯಕ್ಷ ಕಿಶೋರ್ ಪೂಜಾರಿ ನಾಯರ್ಕುಮೇರು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
