ಬಂಟ್ವಾಳ :ಬಂಟ್ವಾಳ ತಾಲೂಕು ನಾವೂರು ಗ್ರಾಮದ ಮೈಂದಾಳ ಶ್ರೀ ಮಹಾದೇವಿ ಮಹಮ್ಮಾಯಿ ದೇವಸ್ಥಾನದ ವಾರ್ಷಿಕ ಜಾತ್ರೆ ಹಾಗೂ ಲಲಿತಾ ಸಹಸ್ರನಾಮ ಯಾಗ ಎ.3ರಂದು ಶುಕ್ರವಾರ ದೇವಸ್ಥಾನದಲ್ಲಿ ಜರಗಲಿದೆ.
ಬೆಳಗ್ಗೆ ವಿವಿಧ ವೈದಿಕ ಕಾರ್ಯಕ್ರಮಗಳು, ಗಂಟೆ 9ರಿಂದ ಲಲಿತಾ ಸಹಸ್ರನಾಮ ಯಾಗ ಪ್ರಾರಂಭ, ನಾಗಬನದಲ್ಲಿ ಆಶ್ಲೇಷ ಬಲಿ, ಮಧ್ಯಾಹ್ನ ಯಾಗದ ಪೂರ್ಣಾಹುತಿ, ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ರಂಗಪೂಜೆ, ಬಳಿಕ ದೈವಗಳಿಗೆ ಪರ್ವ ನಡೆಯಲಿದೆ. 10 ಗಂಟೆಗೆ ನಾವೂರು ಯುವಕ ಮಂಡಲ ಸದಸ್ಯರಿಂದ ಪರತೆಟ್ಟ್ ಪೆÇಸತ್ತುಂಡು ಎಂಬ ತುಳು ನಾಟಕ ನಡೆಯಲಿದೆ.
