ಮಂಗಳೂರು: ‘ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುವ ವಾಹನಗಳಿಗೆ ಕಡ್ಡಾಯ ವಾಗಿ ಜಿಪಿಎಸ್ ಅಳವಡಿಸಬೇಕು. ಈ ವಾಹನಗಳ ಚಾಲಕರ ಹಾಗೂ ನಿರ್ವಾ ಹಕರ ಪೂರ್ವಚರಿತ್ರೆ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಮಾಣ ಪತ್ರ ಪಡೆಯಬೇಕು’ ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಸೂಚಿಸಿದೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಸೋಮವಾರ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಡಿ.ಶರಣಪ್ಪ ಈ ವಿಚಾರ ತಿಳಿಸಿದರು. ‘ಶಾಲೆಗಳಲ್ಲಿ ಅಹಿತಕರ ಘಟನೆ ನಡೆಯದಂತೆ ತಡೆಯಲು ಈ ಕ್ರಮ ಅನಿವಾರ್ಯ. ಶಾಲಾ ವಾಹನ ಸಿಬ್ಬಂದಿ ಯನ್ನು ನೇಮಿಸಿಕೊಳ್ಳುವುದಕ್ಕೆ ಮುನ್ನ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರೆ, ಅವರು ಸಿಬ್ಬಂದಿಯ ಪೂರ್ವಾಪರಗಳನ್ನು ವಿಚಾರಿಸಿ ಶಿಫಾ ರಸು ಮಾಡುತ್ತಾರೆ.
ವಿದ್ಯಾರ್ಥಿಗಳು ಪೋಷಕರು ಸೇರಿ ನಿರ್ದಿಷ್ಟ ವಾಹನ ವನ್ನು ಗೊತ್ತುಪಡಿಸಿ ಅದರಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ನಿರ್ಧರಿಸಿದರೆ, ಆಗಲೂ ವಾಹನ ಚಾಲಕರ ಪೂರ್ವಾಪರ ತಿಳಿಯಲು ಪೊಲೀಸರ ನೆರವು ಪಡೆಯಬಹುದು’ ಎಂದರು.
‘ಶಾಲೆಗೆ ನಿಯೋಜಿಸುವ ಖಾಸಗಿ ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಂಡಿ ರುವ ಭದ್ರತಾ ಸಂಸ್ಥೆಯು ಆಂತರಿಕ ಭದ್ರತಾ ಇಲಾಖೆ ಅನುಮತಿ ಪಡೆದಿರ ಬೇಕು’ ಎಂದು ಅವರು ತಿಳಿಸಿದರು.
ಒಬ್ಬರಿಗೊಂದೇ ರಿಕ್ಷಾ ಪರವಾನಗಿ ಆಟೋರಿಕ್ಷಾ ಪರವಾನಗಿ ಮಾರಾಟವು ದಂದೆಯಾಗಿದೆ. ಕೆಲವು ಸರ್ಕಾರಿ ನೌಕಕರೂ ಪರ ವಾನಗಿ ಹೊಂದಿದ್ದಾರೆ. ಇದ ರಿಂದಾಗಿ ನಿಜವಾಗಿ ದುಡಿಯುವ ಯುವಕರು ಆಟೋರಿಕ್ಷಾ ಪರವಾನಗಿ ಯಿಂದ ವಂಚಿತರಾಗುತ್ತಿದ್ದಾರೆ ಎಂದು ರಿಕ್ಷಾ ಚಾಲಕರ ಸಂಘ ಟನೆಯವರು ಆರೋಪಿಸಿದರು.
‘ಒಬ್ಬವ್ಯಕ್ತಿ ಒಂದು ಆಟೋರಿಕ್ಷಾ ಪರವಾನಗಿಯನ್ನು ಮಾತ್ರ ಹೊಂದಿರ ಬಹುದು. ಅದಕ್ಕಿಂತ ಹೆಚ್ಚಿನ ಪರ ವಾನಗಿ ಹೊಂದಿದ್ದರೆ ಅದನ್ನು ರದ್ದು ಮಾಡಿ. ಪರವಾನಗಿ ಮಾರಾಟ ಮಾಡುವವರಿಗೆ ಇನ್ನು ಮುಂದೆ ಪರ ವಾನಗಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಬೇಕು. ಒಬ್ಬರು ಒಂದು ಪರವಾನಗಿಯನ್ನು ಮಾತ್ರ ಮಾರಾಟ ಮಾಡಬಹುದು. ಒಂದಕ್ಕಿಂತ ಹೆಚ್ಚು ಪರವಾನಗಿ ಮಾರಾಟಕ್ಕೆ ಯಾರಾ ದರೂ ಮುಂದಾದರೆ ಅವುಗಳನ್ನು ರದ್ದು ಪಡಿಸಿ ಆಟೋರಿಕ್ಷಾ ಚಲಾಯಿಸುವ ಯುವಕರಿಗೆ ನೀಡಿ’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

