ಮಂಗಳೂರು: ಪಾದೂರಪೈಪ್ ಲ್ಯೆನ್ ಯೋಜನೆ ಅನ್ವಯ ಉಡುಪಿ ತಾಲೂಕಿನ ಪಾದೂರು ಗ್ರಾಮದಲ್ಲಿ ನಿರ್ಮಿಸಲಾಗುವ ಕಚ್ಚಾತೈಲ ದಾಸ್ತಾನು ಸ್ಥಾವರಕ್ಕೆ ಕಚ್ಚಾತೈಲ ಸಾಗಿಸುವ ಸಲುವಾಗಿ ನೆಲದಡಿ ಕೊಳವೆಗಳನ್ನು ಅಳವಡಿಸುವ ಕಾಮಗರಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಆದರೆ ರೈತರಿಗೆ ನ್ಯಾಯಯುತ ಪರಿಹಾರ ದೊರಕಿಲ್ಲ ಆದರೆ ಯಾವುದೇ ಅಡೆ ತಡೆ ಇಲ್ಲದೆ ಸಾಗುತ್ತಿದ್ದು ಇಂದು ಉಡುಪಿ ಜಿಲ್ಲಾ ಜೆಡಿ ಎಸ್ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ ನೆತ್ರತ್ವದಲ್ಲಿ ಮುಲ್ಕಿಯ ಶಿಮಂತೂರಿನಲ್ಲಿ ಸಭೆ ನಡೆಯಿತು.
paduru pipe (5)

paduru pipe (6)

paduru pipe

paduru pipe (2)

ಸಭೆಯಲ್ಲಿ ನೂರಾರು ಮಂದಿ ಬಾಗಿಯಾಗಿದ್ದು ಮಾರಕ ಕಂಪನಿಗಳಿಂದ ನಮ್ಮ ಭೂಮಿ ಮಲಿನ ವಾಗುತ್ತಿದೆ ಸ್ಥಳೀಯರ ವಿರೋಧವಿದ್ದರೂ ಇಂತಹ ಕಂಪನಿಗಳನ್ನು ಕರ್ನಾಟಕ ಕರಾವಳಿಯಲ್ಲಿಯೇ ಪ್ರಾರಂಬಿಸುತ್ತಾರೆ ಯಾವುದೇ ಕಾರಣಕ್ಕೂ ಇಂತಹ ಕಂಪನಿ ಮತ್ತು ಇದಕ್ಕೆ ಪೂರಕವಾಗಿ ನಡೆಯುವ ಯೋಜನೆಗಳಿಗೆ ವಿರೋಧ ವ್ಯಕ್ತ ಪಡಿಸಬೇಕು. ಪಾದೂರು ಕಚ್ಚಾ ತೈಲ ಪೈಪ್ ಲೈನ್ ಸ್ಥಳಿಯರಿಗೆ ನ್ಯಾಯಯುತ ಪರಿಹಾರ ಘೋಷಿಸದೆ ಸ್ಥಳಿಯರ ವಿರೋಧದ ನಡುವೆ ಸ್ಥಳಿಯ ಗುತ್ತಿಗೆದಾರರು ಕೆಲಸ ಮುಂದುವರಿಸುತ್ತಿದ್ದಾರೆ ಅದನ್ನು ಕೂಡಲೇ ನಿಲ್ಲಿಸಬೇಕೆಂದು ನಿರ್ಣಹಿಸಿ ಕಾಮಗಾರಿ ನಡೆಯುವ ಮುಲ್ಕಿಯ ಪಂಜಿನಡ್ಕ ಪ್ರದೇಶಕ್ಕೆ ಬೇಟಿ ನೀಡಿ ಕಾಮಾಗರಿಯನ್ನು ನಿಲ್ಲಿಸಲಾಯಿತು. ಈ ಸಂದರ್ಭ ಸ್ಥಳೀಯರು ಮತ್ತು ಗುತ್ತಿಗೆದಾರರ ಮದ್ಯೆ ಮಾತಿನ ಚಕಮಕಿಯಾಗಿ ಮುಲ್ಕಿ ಪೋಲಿಸರ ಮದ್ಯ ಪ್ರವೇಶದಿಂದ ತಿಳಿಗೊಂಡಿತು. ನಂತರ ಮಾತನಾಡಿದ ಬೆಳಪು ದೇವಿ ಪ್ರಸಾದ್ ಶೆಟ್ಟಿ ರೈತರ ಕ್ರಷಿಬೂಮಿ ನಾಶವಾಗುತ್ತಿದ್ದು, ಸರಿಯಾದ ಸರ್ವೆ ಕಾರ್ಯ ನಡೆದಿಲ್ಲ ಮಾತ್ರವಲ್ಲದೆ ರೈತರಿಗೆ ನ್ಯಾಯಯುತ ಬೆಲೆ ದೊರೆತಿಲ್ಲ, ಸರಿಯಾದ ನ್ಯಾಯಯುತ ಬೆಲೆ ಕೊಡಬೇಕು ಆ ನಂತರವೇ ಕಾಮಗಾರಿ ಮುಂದುವರಿಸಬೇಕು ಎಂದು ಹೇಳಿದರು
ಯಾವುದೇ ಸರಿಯಾದ ಸರ್ವೆ ಕಾರ್ಯ ನಡೆದಿಲ್ಲ ಮಾತ್ರವಲ್ಲದೆ ಪರಿಹಾರಕ್ಕೆ ಸರಿಯಾದ ಬೆಲೆ ನಿಗಧಿಯಾಗಿಲ್ಲ ಯಾವುದೇ ಸೂಚನೆ ನೀಡದೆ ಕಾಮಗಾರಿಯನ್ನು ನಡೆಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದರು. ಬಳಿಕ ಸಂಸದರು ಮತ್ತು ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಸಂಭಂದಪಟ್ಟವರ ಸಭೆ ನಡೆಸಿ ನಂತರ ತೀರ್ಮಾನಿಸಲಾಗುದು ಎಂದು ತಿಳಿಸಲಾಯಿತು ಈ ಮದ್ಯೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಲ್ಕಿ ಪೂಲಿಸರು  ಸ್ಥಳದಲ್ಲಿದ್ದರು.

By suddi9

Leave a Reply

Your email address will not be published. Required fields are marked *