ಮಂಗಳೂರು: ಕಳೆದ ಎರಡು ವಾರಗಳಿಂದ ಇಳಿಕೆಯ ಹಾದಿ ಹಿಡಿದಿದ್ದ ಬಂಗಾರ ಬೆಲೆ, ದಿಢೀರ್ ಏರಿಕೆ ಕಂಡು ಬಂದಿದ್ದು ಯುಗಾದಿಗೆ ಚಿನ್ನ ಖರೀದಿಯ ಆಸೆ ಹೊಂದಿದ್ದ ಗ್ರಾಹಕರಿಗೆ ಕಹಿ ನೀಡಿದೆ.

gold

ಜಾಗತಿಕ ಮಾರುಕಟ್ಟೆಯಲ್ಲಿ ಚೇತರಿಕೆ ಪ್ರವೃತ್ತಿ ಕಂಡುಬಂದ ಕಾರಣದಿಂದ ಆಭರಣ ವರ್ತಕರು ಮತ್ತು ಚಿಲ್ಲರೆ ಖರೀದಿದಾರರು ಬೃಹತ್ ಪ್ರಮಾಣದಲ್ಲಿ ಖರೀದಿಗೆ ಮುಂದಾದರು. ಇದರ ಪರಿಣಾಮ ಗುರುವಾರ 375 ರೂಪಾಯಿಗಳ ಹಠಾತ್ ಏರಿಕೆ ಕಂಡು ಬಂತು. ಪ್ರತಿ 10 ಗ್ರಾಂ 99.9 ಶುದ್ಧತೆಯ ಚಿನ್ನದ ಬೆಲೆ 26,375 ರೂ.ಗೆ ಹೆಚ್ಚಳವಾದರೆ 99.5 ಶುದ್ಧತೆಯ ಬಂಗಾರ ಕ್ರಮವಾಗಿ 26,375 ರೂಪಾಯಿ ಹಾಗೂ 26,175 ರೂಪಾಯಿಗೆ ಏರಿಕೆ ಕಾಣುವ ಮೂಲಕ ಗ್ರಾಹಕರಲ್ಲಿ ನಿರಾಸೆ ಮೂಡಿಸಿತು.

ಇನ್ನು ಬೆಳ್ಳಿ ಬೆಲೆಯಲ್ಲಿಯೂ 800 ರೂಪಾಯಿ ಹೆಚ್ಚಳವಾಗುವ ಮೂಲಕ ಪ್ರತಿ ಕಿಲೋ 36,200 ರೂಪಾಯಿಗೆ ಏರಿಕೆಕಂಡಿದೆ. ಕೈಗಾರಿಕಾ ಘಟಕಗಳು ಮತ್ತು ನಾಣ್ಯ ತಯಾರಕರು ಭರಾಟೆ ಖರೀದಿ ನಡೆಸಿದ್ದೇ ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ.

By suddi9

Leave a Reply

Your email address will not be published. Required fields are marked *