ಸುದ್ದಿ9 ಕೈಕಂಬ ; ಬಜ್ಪೆ ಠಾಣಾ ವ್ಯಾಪ್ತಿಯ ಸೂರಲ್ಪಾಡಿ ಎಂಬಲ್ಲಿ ಬೈಕ್ ಸ್ಕಿಡ್ ಆಗಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಶುಕ್ರವಾರ ಬೆಳಗ್ಗಿನ ಜಾವ ಸಂಭವಿಸಿದೆ. ಈ ಘಟನೆ ಗುರುವಾರ ತಡರಾತ್ರಿ ನಡೆದಿತ್ತು. ಮೃತ ವ್ಯಕ್ತಿಯನ್ನು ಗುರುಪುರ ನಿವಾಸಿ ದಯಾನಂದ(29) ಎಂದು ಗುರುತಿಸಲಾಗಿದೆ.
ತಡರಾತ್ರಿ ಸೂರಲ್ಪಾಡಿಯಲ್ಲಿ ಬೈಕ್ನಲ್ಲಿ ಬರುತ್ತಿದ್ದ ದಯಾನಂದ ಎದುರಿನಿಂದ ದನ ಅಡ್ಡ ಬಂದಿತೆಂದು ಬೈಕ್ಗೆ ಬ್ರೇಕ್ ಹೊಡೆದಾಗ ಬೈಕ್ ಸ್ಕಿಡ್ ಆಗಿ ಪಕ್ಕದ ಹೊಂಡಕ್ಕೆ ಬಿದ್ದು ಅವರು ದಾರುಣವಾಗಿ ಮೃತಪಟ್ಟಿದ್ದಾರೆ. ಇಲ್ಲಿ ಅನೇಕ ಸಮಯದಿಂದ ಕೆಲವು ವ್ಯಕ್ತಿಗಳು ದನವನ್ನು ಹಟ್ಟಿಯಲ್ಲಿ ಕಟ್ಟದೆ ಬೇಕಾಬಿಟ್ಟಿ ಮೇಯಲು ಬಿಡುತ್ತಿದ್ದು ಚಾಲಕರಿಗೆ ಕಂಟಕವಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
