ಮೂಡುಬಿದಿರೆ : ದಕ್ಷ, ಪ್ರಾಮಾಣಿಕ ಅಧಿಕಾರಿಯಾಗಿ ಬಡವರಿಗೆ ಅಪತ್ಬಾಂಧವನಾಗಿ, ಅಕ್ರಮ ದಂಧೆಕೋರರಿಗೆ ಸಿಂಹಸ್ವಪ್ನವಾಗಿದ್ದ ಐಎಎಸ್ ಅಧಿಕಾರಿ ಡಿ.ಕೆ. ರವಿ ಅವರು ಸೋಮವಾರ ಬೆಂಗಳೂರಿನಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದು ಈ ಪ್ರಕರಣವನ್ನು ಕೂಲಂಕುಷವಾಗಿ ತನಿಖೆ ನಡೆಸಲು ಸಿಬಿಐ ಗೆ ಒಪ್ಪಿಸುವಂತೆ ಒತ್ತಾಯಿಸಿ ದ.ಕ ಜಿಲ್ಲೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜಾತಿಗಳ ನಾಗರಿಕ ಹಕ್ಕು ಜಾಗೃತಿ ಸಮಿತಿ (ರಿ)ಯ ವತಿಯಿಂದ ಮೌನ ಸಾಮೂಹಿಕ ಪ್ರತಿಭಟನೆ ನಡೆಸಿ ಮೂಡುಬಿದಿರೆ ತಹಶೀಲ್ದಾರ್ ಮಹಮ್ಮದ್ ಇಸಾಕ್ ಅವರಿಗೆ ಮನವಿ ಸಲ್ಲಿಸಲಾಯಿತು.
ಸಿಬಿಐ ಗೆ ಒಪ್ಪಿಸುವಂತೆ ಮೂಡುಬಿದಿರೆಯಲ್ಲಿ ಎಸ್ಸಿ ಎಸ್ಟಿ ಸಮಿತಿಯಿಂದ ಮನವಿ

ಜಾತಿ ಮತ್ತು ಪರಿಶಿಷ್ಟ ಪಂಗಡ ಜಾತಿಗಳ ನಾಗರಿಕ ಹಕ್ಕು ಜಾಗೃತಿ ಸಮಿತಿಯ ಜಿಲ್ಲಾಧ್ಯಕ್ಷ ಚಂದ್ರಕುಮಾರ್ ಮಾತನಾಡಿ ನಿಗೂಢವಾಗಿ ಸಾವನ್ನಪ್ಪಿರುವ ಐಎಎಸ್ ಅಧಿಕಾರಿ ಡಿ.ಕೆ ರವಿ ಅವರ ಸಾವು ಅಕಸ್ಮಿಕವಲ್ಲ ಅದು ಆತ್ಮಹತ್ಯೆ ಎಂದು ಪೊಲೀಸ್ ಆಯುಕ್ತ ಎಂ.ಎನ್ ರೆಡ್ಡಿ ಅವರು ಮಾಧ್ಯಮಗಳಿಗೆ ಬೇಜವಾಬ್ದಾರಿಯುತ ಹೇಳಿಕೆಯನ್ನು ನೀಡುತ್ತಿದ್ದಾರೆ. ತಮಗೆ ಈ ಪೊಲೀಸ್ ಅಧಿಕಾರಿಗಳ ಬಗ್ಗೆ ವಿಶ್ವಾಸವಿಲ್ಲ ಆದ್ದರಿಂದ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಆಗ್ರಹಿಸಿದರು.
ದಲಿತ ಕ್ರಿಯಾ ಸಮಿತಿ ಎಸ್ಸಿ ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ಶಿವಾನಂದ ಪಾಂಡ್ರು ಮಾತನಾಡಿ ದಕ್ಷ ಐಎಎಸ್ ಅಧಿಕಾರಿಯಾಗಿದ್ದು ಕೋಲಾರದಲ್ಲಿ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಬಡ, ದಲಿತರ ಸ್ಲಂ ಏರಿಯಾಗಳಿಗೆ ಭೇಟಿ ನೀಡಿ ಒಬ್ಬ ಸಾಮಾನ್ಯ ವ್ಯಕ್ತಿಯಂತೆ ಜನರ ಸಮಸ್ಯೆಗಳನ್ನು ಆಲಿಸಿ ಮೂಲಭೂತ ಸೌಕರ್ಯಗಳನ್ನು ಪ್ರಾಮಾಣಿಕವಾಗಿ ಒಗದಿಸಿಕೊಡುತ್ತಿದ್ದ ವ್ಯಕ್ತಿ ಡಿ.ಕೆ ರವಿ ಅವರು. ಇಂತಹ ವ್ಯಕ್ತಿಗೆ ಸರಕಾರವು ಸಾಮಾಜಿಕವಾದ ಭದ್ರತೆಯನ್ನು ನೀಡದೆ ದುಡಿಸಿಕೊಂಡು ಕೇವಲ ವಗರ್ಾವಣೆಯನ್ನು ಮಾತ್ರ ನೀಡುತ್ತಿದ್ದು ಇದೀಗ ಕೋಲಾರದಿಂದ ಬೆಂಗಳೂರಿಗೆ ವಗರ್ಾವಣೆಗೊಳಿಸಿ ಅವರ ಸಾವಿಗೆ ಪರೋಕ್ಷವಾಗಿ ಕಾರಣವಾಗಿದೆ ಇಂತಹ ಅಧಿಕಾರಿಗೆ ನ್ಯಾಯ ಸಿಗುವಂತೆ ಈ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐಗೆ ನೀಡಬೇಕು ಹಾಗೂ ಮುಂದೆ ಇಂತಹ ದಕ್ಷ ಪ್ರಾಮಾಣಿಕ ಅಧಿಕಾರಿಗಳಿಗೆ ಭದ್ರತೆಯನ್ನು ನೀಡುವಂತಾಗಬೇಕೆಂದು ಹೇಳಿದರು.
ಜಾತಿ ಮತ್ತು ಪರಿಶಿಷ್ಟ ಪಂಗಡ ಜಾತಿಗಳ ನಾಗರಿಕ ಹಕ್ಕು ಜಾಗೃತಿ ಸಮಿತಿಯ ಪ್ರ. ಕಾರ್ಯದಶರ್ಿ ಪದ್ಮನಾಭ ಹೌದಾಲ್, ಕಾರ್ಯದಶರ್ಿ ನಾರಾಯಣ ಕಡಲಕೆರೆ, ಜಗದೀಶ ಕೊಣಾಜೆ ಮತ್ತಿತರರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಚಿತ್ರ : 17 ಮೂಡ್
