ಬಂಟ್ವಾಳ : ಯೋಗ ಎನ್ನುವ ಶಬ್ದವೇ ಆಧ್ಯಾತ್ಮವನ್ನು ಹೇಳುತ್ತದೆ. ನಿತ್ಯ ಜೀವನದಲ್ಲಿ ನಾವು ಮಾಡುವ ಎಲ್ಲಾ ಚಟುವಟಿಕೆಗಳು ಮತ್ತು ನಿತ್ಯ ಕೆಲಸಗಳಲ್ಲಿ ಮನಸ್ಸನ್ನು ತೊಡಗಿಸಿಕೊಂಡು ಮಾಡುವುದೇ ಯೋಗ ಎಂದು ಎಸ್ವಿವೈಎಎಸ್ಎ ಯೂನಿವರ್ಸಿಟಿ ಬೆಂಗಳೂರು ಇಲ್ಲಿನ ಅಸಿಸ್ಟೆಂಟ್ ಪ್ರೊಫೆಸರ್ ರಾಜೇಶ್ ಎಚ್.ಕೆ ನುಡಿದರು . ಅವರು ಅಜ್ಜಿಬೆಟ್ಟು ಬಸವಮಂಟಪ ಅಕ್ಕಮಹಾದೇವಿ ಶಿಶು ಮಂದಿರ ಬಿ.ಸಿ.ರೋಡ್ ನಲ್ಲಿ ನಡೆದ ಯೋಗ ಸಂಜೀವಿನಿ ಇದರ ಪ್ರಥಮ ವರ್ಷದ ವಾರ್ಷಿಕೋತ್ಸವದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು . ಮುಖ್ಯ ಅತಿಥಿ ಡಾ/ರಾಮಚಂದ್ರ ಹೆಗಡೆ ಯೋಗ ಮತ್ತು ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು . ಕಾರ್ಯಕ್ರಮದಲ್ಲಿ ಯೋಗ ಲಾಂಛನ ಬಿಡುಗಡೆ ಮಾಡಲಾಯಿತು.

ಶಿಬಿರಾರ್ಥಿಗಳ ಪರವಾಗಿ ಯೋಗ ಚಿಕಿತ್ಸಕರಾದ ಯೋಗ ಸಂಜೀವಿನಿಯ ಸಂಜಯ್ ಸಿ.ವಿ. ಯವರನ್ನು ಸನ್ಮಾನಿಸಲಾಯಿತು . ಗೌರವಾಧ್ಯಕ್ಷ ಮೋಹನ್ ಅಗ್ರಬೈಲು ಅಧ್ಯಕ್ಷತೆ ವಹಿಸಿದ್ದರು . ವೇದಿಕೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಚಂದ್ರಶೇಖರ ಪೂಜಾರಿ , ಎಲ್.ಐ.ಸಿ ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಕಲ್ಮಾಡಿ, ಎಸ್.ಬಿ.ಐ. ಬಿಸಿ.ರೋಡ್ ಶಾಖೆ ಮ್ಯಾನೇಜರ್ ರಾಘವಯ್ಯ , ಯೋಗಸಂಜೀವಿನಿಯ ಸಂಸ್ಥಾಪಕ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು . ನ್ಯಾಯವಾದಿ ರಾಘವೇಂದ್ರ ಬನ್ನಿಂತಾಯ ಸ್ವಾಗತಿಸಿದರು . ಸುಬ್ರಹ್ಮಣ್ಯ ಭಟ್ ವಂದಿಸಿ , ಸುಶೀಲಾ ಕಾರ್ಯಕ್ರಮ ನಿರೂಪಿಸಿದರು.
