ಬಂಟ್ವಾಳ: ಸಂಘ ಮತ್ತು ಸಂಸ್ಥೆಗಳನ್ನು ಹುಟ್ಟುಹಾಕುವುದು ಸುಲಭ ಅದನ್ನು ಉಳಿಸಿ ಬೆಳೆಸುವುದು ಇಂದಿನ ಯುವಕರಿಗೆ ಸವಾಲು, ಸವಾಲಿನ ಜೊತೆ ಎದೆಯೊಡ್ಡಿ ನಿಂತು ಯುವಕರು ಬಲಿಷ್ಟರಾದಾಗ ಪ್ರಬುದ್ದ ಸಮಾಜ ನಿರ್ಮಾಣ ಸಾಧ್ಯ, ಈ ನಿಟ್ಟಿನಲ್ಲಿ ನೇಲ್ಯಡ್ಕ ಅಂತರ-ರಾಮನಗರ,ನರಿಕೊಂಬು ಹಿಂದೂ ಯುವ ಶಕ್ತಿ ಪ್ರಥಮ ಹೆಜ್ಜೆ ಇಟ್ಟಿರುವುದು ಇತರರಿಗೆ ಮಾದರಿಯಾಗಲಿ ಎಂದು ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಹೇಳಿದರು.
1 (3)
ಅವರು ನೇಲ್ಯಡ್ಕ ಅಂತರ-ರಾಮನಗರ,ನರಿಕೊಂಬು ಹಿಂದೂ ಯುವ ಶಕ್ತಿ  ಪ್ರಥಮ ವರ್ಷದ ಸಾಮೂಹಿಕ ಶನೀಶ್ವರ ಪೂಜೆಯ ಧಾರ್ಮಿಕ ಪೂಜೆಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಕೆಲಸಗಳನ್ನು ಮಾಡುವ ಮೂಲಕ ಗ್ರಾಮದ ಅಭಿವೃದ್ದಿಯಲ್ಲಿ ಕಾರ್ಯದಲ್ಲಿ ತೊಡಗಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ವಹಿಸಿದ್ದರು. ಧಾರ್ಮಿಕ ಭಾಷಣ ಜಾನಪದ ವಿದ್ವಾಂಸ ತುಳುವ ಬೊಳ್ಳಿ ದಯಾನಂದ ಕತ್ತಲ್ ಸಾರ್ ಮಾಡಿದರು. ವೇದಿಕೆಯಲ್ಲಿ ನ್ಯಾಯವಾಧಿ ಅಶಾ ಪ್ರಸಾದ್, ತಾ.ಪಂ.ಅಧ್ಯಕ್ಷ ಯಶವಂತ ದೇರಾಜೆ, ಪ್ರಕಾಶ್ ಅಂಚನ್, ಪುರಸಭಾ ಸದಸ್ಯ ಗೋವಿಂದ ಪ್ರಭು, ಚರಣ್ ಕುಮಾರ ಜುಮಾದಿಗುಡ್ಡೆ, ರೈತರ ಸೇವಾ ಸಹಾಕಾರಿ ಬ್ಯಾಂಕಿನ ನಿರ್ದೇಶಕ ಪ್ರೇಮನಾಥ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯದಲ್ಲಿ ವಿವಿಧ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದವರನ್ನು ಅಭಿನಂದಿಸಲಾಯಿತು. ನವೀನ್ ಬಂಗೇರ ಸ್ವಾಗತಿಸಿ, ಶ್ರೀಕಾಂತ್ ಎನ್ ವಂದಿಸಿದರು, ನಿರೂಪಣೆ ವಿಜಯ ಯೋಗಿಶ್ ಸಪಲ್ಯ ಮಾಡಿದರು

By suddi9

Leave a Reply

Your email address will not be published. Required fields are marked *