ವಾಮಂಜೂರು ತಿರುವೈಲು ಶ್ರೀ ಅಮೃತೇಶ್ವರ ದೇವಸ್ಥಾನದಲ್ಲಿ ಮಾ.8ರಂದು ವೇದಮೂರ್ತಿ  ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಹಾಗೂ ಅರ್ಚಕ ಟಿ. ಗೋಪಾಲಕೃಷ್ಣ ಭಟ್ ಉಪಸ್ಥಿತಿತಲ್ಲಿ ಸಂಭ್ರಮದ ಬ್ರಹ್ಮಕಲಶೋತ್ಸವ ನಡೆಯಿತು.
ಬೆಳಗ್ಗೆ 8.30ರಿಂದ ಕಲಶಾಭಿಷೇಕ ಪ್ರಾರಂಭವಾಗಿ 10.38ಕ್ಕೆಸಹಸ್ರ ಕಲಶ ಸಹಿತ ಬ್ರಹ್ಮಕಲಶಾಭಿಷೇಕ ನಡೆಯಿತು. ಬಳಿಕ ಪ್ರಸನ್ನ ಪೂಜೆ, 12ಕ್ಕೆ ಪಲ್ಲಪೂಜೆ, 12.30ಕ್ಕೆ ಮಹಾಪೂಜೆ ನಡೆದಬಳಿಕ ಅನ್ನಸಂತರ್ಪಣೆ ನಡೆಯಿತು.

SAI_2747

SAI_2470

SAI_2463

SAI_2418

SAI_2468

SAI_2121

SAI_1124

SAI_1774

SAI_2052

 

ಸಂಜೆ 8.30ಕ್ಕೆ ಮಹಾರಂಗಪೂಜೆ, ಬಲಿ ಉತ್ಸವ ನಡೆಯಿತು. ಈ ಸಂದರ್ಭ ದೇವಳ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಸೀತಾರಾಮ ಜಾಣು ಶೆಟ್ಟಿ, ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ. ಚಂದ್ರಹಾಸ ರೈ, ಕಾರ್ಯಾಧ್ಯಕ್ಷ ಪುರುಷೋತ್ತಮ, ಡಾ. ದಯಾಕರ ಪೂಂಜ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಮೋಹನ್ ಅಮೀನ್, ಮಂಜುನಾಥ ಭಂಡಾರಿ ಶೆಡ್ಡೆಮತ್ತಿತರರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 10.00ರಿಂದ ಲೋಕೇಶ್ ಸಂಪಿಗೆ ಮತ್ತು ಆರತ್ ಹಳೆಯಂಗಡಿ ಇವರಿಂದ ನಾದ-ನಿನಾದ ವಾದ್ಯ ಸಂಗೀತ, 1.00ರಿಂದ ಪ್ರವೀಣ್ ಗುರುಪುರ ಮತ್ತು ಬಳಗದವರಿಂದ ಭಕ್ತಿಸುಧಾ, 2.30ರಿಂದ ರಕ್ಷಿತ್ ಶೆಟ್ಟಿ ಪೆಡ್ರೆ ನೇತೃತ್ವದಲ್ಲಿ ಯಕ್ಷನಾಟ್ಯ ವೈಭವ ಕಾಳಿಂಗ ಮರ್ದನ ಹಾಗೂ ಯಕ್ಷಗಾನ ಬಯಲಾಟ ನಡೆಯಿತು.
ರಾತ್ರಿ 8ರಿಂದ ಗುರುಪುರ ಬಂಟರ ಮಾತೃ ಸಂಘ ವತಿಯಿಂದ ತುಳುವ ನಡಕೆ ಸಾಂಸ್ಕೃತಿಕ ಸಿಂಚನ, ರಾತ್ರಿ 9.30ರಿಂದ ನಮ್ಮ ಕಲಾವಿದರು ಬೆದ್ರ ತಂಡದಿಂದ “ಆಪುಜಿ ಪಂಡ ದೀಪುಜಿ’ ನಾಟಕ ನಡೆಯಿತು.

ಪೋಟೋಗಳು: ವಿಶಾಲ್ ವಾಮಂಜೂರು

By suddi9

Leave a Reply

Your email address will not be published. Required fields are marked *