ಮೂಡುಬಿದರೆ : ಶಿರ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಎಂಡೋ ಪೀಡಿತರಿಗೆ ವೈದ್ಯಕೀಯ ಹಾಗೂ ಎಂಡೋ ಪೀಡಿತರು ಹಾಗೂ ಅಂಗವಿಕಲ ತಪಾಸಣೆಯಲ್ಲಿ 90 ಮಂದಿ ಎಂಡೋ ಪೀಡಿತರೆಂದು ಗುರುತಿಸಲಾಯಿತು.
ಮಂಗಳೂರು, ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕಿನ ಸುಮಾರು 270 ಮಂದಿ ತಪಾಸಣೆ ಒಳಗಾಗಿದ್ದು ಅದರಲ್ಲಿ ಎಂಡೋಪೀಡಿತರನ್ನು ಗುರುತಿಸಿ ಚಿಕಿತ್ಸೆ ನೀಡಲಾಯಿತು.
ದ.ಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಕಾರ್ಯಕ್ರಮ ನಡೆಯಿತು. ಶಿರ್ತಾಡಿ ಗ್ರಾ.ಪಂ., ಫ್ರೆಂಡ್ಸ್ ಕ್ಲಬ್ ಹೊಸಂಗಡಿ, ಕ್ಯಾಥೋಲಿಕ್ ಸಭಾ ಶಿರ್ತಾಡಿ ಘಟಕ ಹಾಗೂ ಶಿರ್ತಾಡಿ, ನಾರಾವಿ, ವೇಣೂರು, ಅಳದಂಗಡಿ, ಬೆಳ್ತಂಗಡಿ ಲಯನ್ಸ್ ಕ್ಲಬ್ ಸಹಯೋಗ ನೀಡಿದವು.
ಶಿರ್ತಾಡಿ ಗ್ರಾ.ಪಂ ಅಧ್ಯಕ್ಷ ಲಕ್ಷ್ಮಣ್ ಸುವರ್ಣ ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿದರು.
270 ತಪಾಸಣೆಗೆ ಒಳಗಾಗಿದ್ದು 90 ಮಂದಿ ಎಂಡೋ ಪೀಡಿತರಾಗಿದ್ದಾರೆ ಎಂದಯ ಅಂಗಲವಿಕತೆ,
ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣ ಇಲಾಖೆಯ ನೋಡೆಲ್ ಅಧಿಕಾರಿ ಡಾ.ಅರುಣ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಎಂಡೋಸಲ್ಫಾನ್ ಪೀಡಿತರ ಬಗ್ಗೆ 2012ರಿಂದ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದ್ದೇವೆ. ಸರ್ಕಾರವು ಮಾ. 2015ರವರೆಗೆ ಗುರುತಿಸುವಿಕೆಯ ಗಡುವು ನೀಡಿದ್ದು ಈ ಬಗ್ಗೆ ಪ್ರಕ್ರಿಯೆ ಆರಂಭಿಸಲಾಗಿದೆ. ಮೂರು ಹಂತದಲ್ಲಿ ಶೇಕಡವಾರು ನ್ಯೂನ್ಯತೆ ಅಧಿಕೃತಗೊಂಡರೆ ಸರಕಾರದಿಂದ ಸೌಲಭ್ಯಗಳನ್ನು ನೀಡಲಾಗುವುದು ಎಂದು ಹೇಳಿದರು.
ತಾ.ಪಂ ಸದಸ್ಯ ರುಕ್ಕಯ ಪೂಜಾರಿ ಮಾತನಾಡಿ ಸಮಾಜ ನಮಗೆ ಏನು ನೀಡಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಾವೇನು ಕೊಡುಗೆಯನ್ನು ನೀಡಿದ್ದೇವೆ ಎನ್ನುವುದು ಮುಖ್ಯ ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಸೇರಿ ಇಂತಹ ಸಮಾಜ ಮೆಚ್ಚುವ ಕಾರ್ಯಕ್ರಮವನ್ನು ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು.
ಜಿ.ಪಂ ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್, ದರೆಗುಡ್ಡೆ ಗ್ರಾ.ಪಂ ಅಧ್ಯಕ್ಷ ಸುಭಾಶ್ಚಂದ್ರ ಚೌಟ, ಮಾಜಿ ಅಧ್ಯಕ್ಷ ಮೋನಪ್ಪ ಮೂಲ್ಯ, ಲಯನ್ಸ್ ವಲಯಾಧ್ಯಕ್ಷ ಜೋ ಪಿರೇರಾ, ಲಯನ್ಸ್ ಅಧ್ಯಕ್ಷರುಗಳಾದ ಸಂತೋಷ್ ಸಲ್ಡಾನ ಶಿರ್ತಾಡಿ, ದಯಾನಂದ ಭಂಡಾರಿ ವೇಣೂರು, ಹೆಚ್.ರಾಮಕೃಷ್ಣ ಗೌಡ ಬೆಳ್ತಂಗಡಿ, ಸಿಪ್ರಿಯಾನ್ ಫೆರ್ನಾಂಡಿಸ್ ಅಳದಂಗಡಿ ಅತಿಥಿಗಳಾಗಿ ಭಾಗವಹಿಸಿದ್ದರು.
ಶಿರ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರಕಾಶ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ನಾರಾವಿ ಲಯನ್ಸ್ ಕ್ಲಬ್ನ ಅಧ್ಯಕ್ಷ ರಾಮಚಂದ್ರ ಭಟ್ ವಂದಿಸಿದರು.



