ಮಂಗಳೂರು: ಮಂಗಳೂರು ಲೋಕೋಪಯೋಗಿ ಇಲಾಖೆಗೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಬೆಂಗಳೂರು-ಜಾಲ್ಸೂರು ರಾಷ್ಟ್ರೀಯ ಹೆದ್ದಾರಿ 85ಗೆ ಸಂಬಂಧಪಟ್ಟ ಕಡತಗಳನ್ನು ಪರಿಶೀಲಿಸಿದರು. ಈ ಹೆದ್ದಾರಿಯು ಸುಳ್ಯ ಮೂಲಕ ಹಾದು ಹೋಗಲಿದ್ದು ವ್ಯಾಪಕ ಅವ್ಯವಹಾರ ನಡೆದಿದೆ ಎಂದು ದೂರುಗಳು ಬಂದ ಕಾರಣ ಈ ದಾಳಿ ನಡೆಸಲಾಯಿತು. ಲೋಕಾಯುಕ್ತ ಸಹಾಯಕ ಅಧೀಕ್ಷಕ ಉಮೇಶ್ ಜಿ.ಶೇಟ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಹೆದ್ದಾರಿ ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. 2005ರಲ್ಲಿ ಈ ಹೆದ್ದಾರಿಯ ಕಾಮಗಾರಿಯನ್ನು ಶರೀಫ್ ಕನ್ಸ್ಟ್ರಕ್ಷನ್ ಸಂಸ್ಥೆ ವಹಿಸಿಕೊಂಡಿತ್ತು. ನವಂಬರ್ 2005ರಲ್ಲಿ ಈ ರಸ್ತೆಯ ಕಾಮಗಾರಿ ಆರಂಭವಾಗಿತ್ತು.

Karlokayuktha

 

ಗುತ್ತಿಗೆ ಒಪ್ಪಂದದಂತೆ ಈ ಭಾಗದ ರಸ್ತೆಯನ್ನು 33 ಕಿ.ಮೀವರೆಗೆ 5.5 ಮೀಟರ್ ಅಗಲಗೊಳಿಸುವ ಹಾಗೂ ಇತರ ರಸ್ತೆಗಳನ್ನು ನಿರ್ಮಿಸುವ ಪ್ರಸ್ತಾಪವಿತ್ತು. ಆದರೆ ಇಷ್ಟು ಸಮಯದವರೆಗೆ ಯಾವುದೇ ಕಾಮಗಾರಿ ನಡೆದಿಲ್ಲ ಎಂದು ಆರೋಪಿಸಲಾಗಿದೆ. ಈ ಹೆದ್ದಾರಿ ನಿರ್ಮಾಣದ ಒಟ್ಟು ವೆಚ್ಚ 22 ಕೋಟಿ ಎಂದು ಅಂದಾಜಿಸಲಾಗಿದೆ. ಆದರೆ ನಿಗದಿತ ಮೊತ್ತದ ಅರ್ಧದಷ್ಟು ಹಣ ಈಗಾಗಲೇ ಖಾಲಿಯಾಗಿದ್ದರೂ ರಸ್ತೆ ಮಾತ್ರ ಹಿಂದಿನಂತೆಯೇ ಇದೆ ಎಂದು ಮೂಲಗಳು ತಿಳಿಸಿವೆ. ಈ ಹಗರಣದಲ್ಲಿ ಹಲವು ವ್ಯಕ್ತಿಗಳು ಭಾಗಿಯಾಗಿರುವುದಾಗಿ ತಿಳಿಸಿರುವ ಲೋಕಾಯುಕ್ತ ಅಧಿಕಾರಿಗಳು ಅವರ ವಿರುದ್ಧ ಕಾನೂನು ಸಮರ ಸಾರಿದ್ದಾರೆ.

By suddi9

Leave a Reply

Your email address will not be published. Required fields are marked *