ಸುದ್ದಿ9 ಮಂಗಳೂರು; ವಾಹನ ಚಾಲನೆ ಸಂದರ್ಭ `ನಾನು ಮೊದಲು’ ಎನ್ನುವ ಬದಲು `ನೀವು ಮೊದಲು’ ಎನ್ನುವ ಸಹಕಾರ ಮನೋಭಾವ ಬೆಳೆದಾಗ ಮಾತ್ರ ಅಪಘಾತಗಳನ್ನು ಕಡಿಮೆಗೊಳಿಸಲು ಸಾಧ್ಯ. ಕಾನೂನು ಎಷ್ಟೇ ಉತ್ತಮವಾಗಿದ್ದರೂ ಪಾಲಿಸುವ ಜನ ಸರಿಯಾಗದಿದ್ದಲ್ಲಿ ಫಲ ಕೆಟ್ಟದಾಗಿರುತ್ತದೆ ಎಂದು ಸಹಾಯಕ ಪ್ರಾದೇಶಿಕ ಸಾರಿಗೆ ಅಕಾರಿ ಜಿ.ಎಸ್.ಹೆಗಡೆ ತಿಳಿಸಿದರು.

ಕಾನೂನು ಸಾಕ್ಷರತಾ ರಥ ಹಾಗೂ ಸಂಚಾರಿ ಜನತಾ ನ್ಯಾಯಾಲಯದ ಅಭಿಯಾನದ ಅಂಗವಾಗಿ ಆರ್ಟಿಒ ಕಚೇರಿ ಸಭಾಂಗಣದಲ್ಲಿ ಬುಧವಾರ ಹೊಸ ವಾಹನ ಲೈಸನ್ಸ ನೋಂದಣಿದಾರರಿಗೆ ಮೋಟಾರು ವಾಹನ ಕಾಯ್ದೆ ಬಗ್ಗೆ ವಿವರಿಸಿ ಅವರು ಮಾತನಾಡಿದರು.
ಯಾರ ಹೆಸರಿನಲ್ಲಿ ವಾಹನ ನೋಂದಣಿಯಾಗಿದೆಯೋ ಅವರೇ ವಾಹನ ಚಲಾವಣೆ ಮಾಡಬೇಕು. ಯಾಕೆಂದರೆ ಲೈಸನ್ಸ್ ಇಲ್ಲದೇ ಇದ್ದವರಿಗೆ ವಾಹನ ನೀಡಿದರೆ ಚಾಲಕನ ಜತೆಗೆ ಯಾರ ಹೆಸರಿನಲ್ಲಿ ವಾಹನ ನೋಂದಣೆಯಾಗಿದೆಯೋ ಅವರಿಗೂ ದಂಡ ವಿಸಲಾಗುವುದು. ನೋಂದಣಿ ನಂತರ ನಂಬರ್ ಪ್ಲೇಟ್ ಕಡ್ಡಾಯ. ಗಾಡಿಯಲ್ಲಿ ಮೂಲ ದಾಖಲೆ ಪತ್ರಗಳನ್ನು ಇಡಬೇಕೆಂದು ಇಲ್ಲ. ಯಾಕೆಂದರೆ ವಾಹನ ಕಳವಾಗುವ ಸಂದರ್ಭ ಇದರಿಂದ ಕಳ್ಳರು ಲಾಭ ಪಡೆಯುತ್ತಾರೆ. ಹೀಗಾಗಿ ನಕಲು ಪ್ರತಿಯನ್ನು ವಾಹನದಲ್ಲಿಟ್ಟರೆ ಉತ್ತಮ. ಆದರೆ ವಾಹನ ಚಾಲನಾ ಪರವಾನಗಿಯ ಮೂಲ ದಾಖಲೆ ಪತ್ರ ಇರಲೇಬೇಕು. ರಾತ್ರಿ ಹೊತ್ತು ವಾಹನ ಚಲಾವಣೆ ಕಡಿಮೆ ಮಾಡಿದಷ್ಟು ಉತ್ತಮ. ಯಾಕೆಂದರೆ ಅಪಘಾತ ಸಂದರ್ಭ ರಾತ್ರಿ ಹೊತ್ತು ಸಹಕರಿಸಲು ಯಾರೂ ಇರೋದಿಲ್ಲ. ವಾಹನ ಚಲಾಯಿಸುವಾಗ ಪಥ ಬದಲಿಸುವ ಸಂದರ್ಭ ಇಂಡಿಕೇಟರ್ ಜತೆಗೆ ಕೈ ಸನ್ನೆ ಮಾಡಿದರೆ ಉತ್ತಮ. ಸುರಕ್ಷತೆ ದೃಷ್ಟಿಯಿಂದ ಕಾರು ಚಾಲಕರು ಸೀಟ್ ಬೆಲ್ಟ್ , ಬೈಕ್ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ. ಪಾನಮತ್ತರು, ಮಾನಸಿಕ ಅಸ್ವಸ್ಥರು, ಹಾಗೂ ಅಫಘಾತಕ್ಕೆ ಕಾರಣರಾಗಿ ಓಡಿಹೋದವರನ್ನು ವಾರೆಂಟ್ ಇಲ್ಲದೆ ಬಂಸುವ ಅಕಾರವಿದೆ ಎಂದರು.
ಪ್ರೈವೇಟ್ ಓಮಿನಿಗಳಲ್ಲಿ ಮ್ಕಕಳನ್ನು ಶಾಲೆಗೆ ಕಳುಹಿಸಬೇಡಿ. ಅಫಘಾತವಾದಾಗ ಪ್ರಶ್ನಿಸುವ ಯಾವ ಹ್ಕಕೂ ನಿಮಗಿರೋದಿಲ್ಲ. ಪ್ರತಿಯೊಂದು ಶಾಲೆಯವರೂ ತಮ್ಮದೇ ಆದ ವಾಹನಗಳನ್ನು ಹೊಂದಿರುವುದು ಸುರಕ್ಷತೆ ದೃಷ್ಟಿಯಿಂದ ಉತ್ತಮ ಎಂದರು.
ದೇಶದಲ್ಲಿ ವಾಹನ ತೆರಿಗೆ ಏಕರೂಪಿಯಾಗಿಲ್ಲ. ಒಂದೊಂದು ರಾಜ್ಯದಲ್ಲಿ ವಿಭಿನ್ನವಾದ ತೆರಿಗೆ ಇದೆ. ಪಾಂಡಿಚೇರಿಯಲ್ಲಿ ಕೇವಲ 50,000 ಸಾವಿರ ರೂ., ತೆರಿಗೆ ಇರುವ ಕಾರಣ ಇತ್ತೀಚಿನ ದಿನಗಳಲ್ಲಿ ಅಲ್ಲಿ ವಾಹನ ನೋಂದಾವಣಿ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಸಮಸ್ಯೆಗಳನ್ನು ಸರಿಪಡಿಸಬೇಕಾದರೆ ದೇಶದಾದ್ಯಂತ ಏಕರೂಪಿ ತೆರಿಗೆಯನ್ನು ಜಾರಿಗೊಳಿಸಬೇಕಾದ ಅಗತ್ಯತೆ ಇದೆ ಎಂದರು.
ರಿಕ್ಷಾ ಡ್ರೈವರ್ನವರು ತಮ್ಮ ವ್ಯಾಪ್ತಿಯ ಒಳಗಡೆ ಕೆಲವೊಂದು ಸ್ಥಳಕ್ಕೆ ಬರೋದಿಲ್ಲ ಎಂದು ಪತ್ರಕರ್ತರೊಬ್ಬರು ತಿಳಿಸಿದಾಗ ವ್ಯಾಪ್ತಿಯ ಒಳಗಡೆ ಎಲ್ಲೇ ಕರೆದರೂ ಅಟೋದವರು ಬರಲೇ ಬೇಕು, ಬರದಿದ್ದರೆ ಕಾನೂನು ಉಲ್ಲಂಘಿಸಿದಂತೆ. ಮುಂದಿನ ದಿನಗಳಲ್ಲಿ ಕರೆದಾಗ ಬರದೇ ಇದ್ದ ಆಟೋ ಸಂಖ್ಯೆಯನ್ನು ಬರೆದು ನಮಗೆ ಮೈಲ್ ಮಾಡಿ ಅಥವಾ ಪೋಸ್ಟ್ ಕಾಡರ್್ನಲ್ಲಿ ಮರೆದು ಕಳುಹಿಸಿ ಅವರ ವಿರುದ್ಧ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಕಾರ, ಜಿಲ್ಲಾಡಳಿತ, ನಗರ ಪೋಲಿಸ್ ಇಲಾಖೆ, ಜಿಲ್ಲಾ ಪಂಚಾಯಿತಿ, ಸಾರಿಗೆ ಇಲಾಖೆ, ಮಂಗಳೂರು ವಕೀಲರ ಸಂಘ, ಜಿಲ್ಲಾ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು

