ವೀರಕಂಭ : ವೀರಕಂಭ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳ ಶಂಕು ಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮವನ್ನು ಕರ್ನಾಟಕ ಸರಕಾರದ ಮಾನ್ಯ ಅರಣ್ಯ ಪರಿಸರ ಜೀವಶಾಸ್ತ್ರ ಸಚಿವರು ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ.ರಮಾನಾಥ ರೈಯವರು ಇತ್ತೀಚಿಗೆ ನೆರವೇರಿಸಿದರು.
DSC_9275

DSC_9272

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಲವಾರು ವರ್ಷಗಳಿಂದ ನಿವೇಶನ ಹಕ್ಕು ಪತ್ರ ವಿಲ್ಲದೆ ಸರಕಾರದಿಂದ ಸಿಗುವ ಸವಲತ್ತುಗಳಿಂದ ವಂಚಿತರಾದ ಕುಟುಂಬಗಳಿಗೆ ಸರಕಾರದ ಮಹತ್ವಾಕಾಂಕ್ಷಿ ಯಾದ 94/ಅ ಮೂಲಕ ಮಂಜೂರಾದ ಹಕ್ಕು ಪತ್ರವನ್ನು ರಾಜ್ಯದಲ್ಲಿ ಪ್ರಥಮವಾಗಿ ಬಂಟ್ವಾಳ ವಿಧಾನ ಸಭಾ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದು ಇದರಿಂದ ಅರ್ಹ ಬಡ ಕುಟುಂಬಗಳಿಗೆ ವರದಾನವಾಗಿದೆ ಎಂದರು.
ಮಹತ್ವದ ಅಭಿವೃದ್ಧಿ ಕಾಮಗಾರಿಗಳು ಅನುಷ್ಟಾನಗೊಳಿಸುವಾಗ ಕೆಲವೊಂದು ತೊಡಕುಗಳು ಎದುರಾಗುತ್ತಿದ್ದು ಇದರಿಂದ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗುತ್ತದೆ. ಸರಕಾರದಿಂದ ಮಂಜೂರಾಗುವ ಯೋಜನೆಗಳು ಸಾರ್ವಜನಿಕರಿಗೆ ಪ್ರಯೋಜನವಾಗಬೇಕಾದರೆ ನಾವು ನಮ್ಮ ಸ್ವಹಿತಾಸಕ್ತಿಯಿಂದ ಹೊರಬಂದು ಆ ಯೋಜನೆಗಳು ಅನುಷ್ಟಾನಗೊಳ್ಳಲು ತುಂಬು ಹೃದಯದಿಂದ ಸಹಕಾರ ಮಾಡಬೇಕು ಎಂದರು.
ಜಿ.ಪಂ.ಸದಸ್ಯರಾದ ಶ್ರೀ ಎಂ.ಎಸ್ ಮಹಮ್ಮದ್ ಪ್ರಸ್ತಾವಿಕ ಭಾಷಣದಲ್ಲಿ ವೀರಕಂಭ ಗ್ರಾ.ಪಂ ವ್ಯಾಪ್ತಿಯಲ್ಲಿ ಅನುಷ್ಟಾನಗೊಂಡ ವಿವಿಧ ಕಾಮಗಾರಿಗಳ ವಿವರ ನೀಡಿದರು .94/ಅ ಯೋಜನೆಯ ಮೂಲಕ ರಾಜ್ಯದಲ್ಲಿ ಪ್ರಥಮ ಬಾರಿಗೆ ಬಡವರಿಗೆ ಹಕ್ಕು ಪತ್ರ ನೀಡಲಾಗಿದೆ ,ಇದು ಸಚಿವ ರೈ ಇವರ ಸಾಧನೆ ಎಂದರು .ಸಚಿವ ರೈ ಇವರು ಜನರ ಪರವಾಗಿ ಅಭಿವೃದ್ಧಿ ಕೆಲಸ ಮಾಡುತ್ತಿರುವ ಬಗ್ಗೆ ಕಾಳಜಿ ಹೊಂದಿರುವ ಒಬ್ಬ ಅಸಾಮಾನ್ಯ ಸಚಿವರು ಆಗಿದ್ದಾರೆ ಎಂದು ಸಭೆಯನ್ನು ಉದ್ಧೇಶಿಸಿ ಮಾತನಾಡಿದರು.
ತಾ.ಪಂ ಸದಸ್ಯರಾದ ಶ್ರೀ ಮಾಧವ ಮಾವೆ ಇವರು ಮಾತನಾಡಿ ಸಚಿವರು ಬಡವರಿಗೆ ಹಕ್ಕುಪತ್ರ 94/ಅ ಯನ್ನು ವಿತರಿಸುವ ವ್ಯವಸ್ಥೆಯನ್ನು ರಾಜ್ಯದಲ್ಲಿ ಪ್ರಥಮ ಬಾರಿ ಮಾಡಿದ್ದಾರೆ .ವೀರಕಂಭ ಗ್ರಾಮ ಪಂಚಾಯತ್ ವ್ಯಾಪ್ತಿಗೆ ವಿವಿಧ ಕಾಮಗಾರಿಗಳಿಗೆ ಅತೀ ಹೆಚ್ಚು ಅನುದಾನ ಒದಗಿಸಿದ್ದಾರೆ ಎಂದರು.
ಈ ಕಾರ್ಯಕ್ರಮದಲ್ಲಿ ಅರ್ಹ ಫಲಾನುಭವಿಗಳಿಗೆ ಸರಕಾರದ ಯೋಜನೆಗಳಾದ ಪಿಂಚಣಿ ಸೌಲಭ್ಯ,
94/ಅ ಹಕ್ಕುಪತ್ರವನ್ನು ವಿತರಿಸಲಾಯಿತು.ಹಾಗೂ ಈ ಕೆಳಗಿನ ಕಾಮಗಾರಿಗಳ ಶಂಕು ಸ್ಥಾಪನೆ ಹಾಗೂ ಉದ್ಘಾಟನೆ ಮಾಡಲಾಯಿತು.

1) ಪೆಲತ್ತಡ್ಕ ಮಸೀದಿ ಬಳಿ ಕಾಂಕ್ರೀಟ್ ರಸ್ತೆ ,ಶಂಕು ಸ್ಥಾಪನೆ
2) ಪಾತ್ರತೋಟ .ಕಾಂಕ್ರೀಟ್ ರಸ್ತೆ, ಶಂಕು ಸ್ಥಾಪನೆ
3) ಮಂಗಳಪದವು -ಬೆಂಞಂತ್ತಿಮಾರು ಕಾಂಕ್ರೀಟ್ ರಸ್ತೆ ,ಶಂಕು ಸ್ಥಾಪನೆ
4) ಮಂಗಳಪದವು ಜುಮ್ಮಾ ಮಸೀದಿ ಕಾಂಕ್ರೀಟ್ ರಸ್ತೆ ,ಶಂಕು ಸ್ಥಾಪನೆ
5) ಕೊಟ್ಟಾರಿ ಕಟ್ಟೆ- ಬೆಂಞಂತ್ತಿಮಾರು ನಮ್ಮ ಗ್ರಾಮ ನಮ್ಮ ರಸ್ತೆ ,ಉದ್ಘಾಟನೆ

ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಆಶಾಲತಾ ,ಉಪಾಧ್ಯಕ್ಷರಾದ ಶ್ರೀಮತಿ ಚಂದ್ರಿಕಾ ,ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಐಡಾ ಸುರೇಶ್ ,ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಶ್ರೀ ನರೇಂದ್ರ ಬಾಬು ,ಕಿರಿಯ ಅಭಿಯಂತರರಾದ ಶ್ರೀ ಜಗದೀಶ್ ,PಒಉSಙ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಾದ ಶ್ರೀ ಜಯರಾಜ್ ಪೂಜಾರಿ , ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಆಲಿ ,ಕಂದಾಯ ನಿರೀಕ್ಷಕರು ಶ್ರೀ ದಿವಾಕರ್, ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ರೀಮತಿ ಸುನೀತಾ ಜಿ.ಸಾಲ್ಯಾನ್ ಮತ್ತು ಗ್ರಾ. ಪಂ.ಸದಸ್ಯರು ಭಾಗವಹಿಸಿದ್ದರು .
ಸದಸ್ಯರಾದ ಶ್ರೀ ರಘು ಪೂಜಾರಿ ಸ್ವಾಗತಿಸಿ ,ಸದಸ್ಯರಾದ ಚಂದ್ರಶೇಖರ್ ರೈ ವಂದಿಸಿದರು. ಲೆಕ್ಕ ಸಹಾಯಕರಾದ ಶ್ರೀಮತಿ ಟ್ರೆಸ್ಸಿ ರೊಡ್ರಿಗಸ್ ಕಾರ್ಯಕ್ರಮ ನಿರ್ವಹಿಸಿದರು

By suddi9

Leave a Reply

Your email address will not be published. Required fields are marked *