ವಿಜ್ಞಾನ, ತಂತ್ರಜ್ಞಾನದಲ್ಲಿ ಸಂಶೋಧನೆ ಜತೆಯಿರಲಿ ವಿವೇಚನೆ
ಮೂಡುಬಿದರೆ: ಸಮಾಜ ಏಳಿಗೆಗೆ ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ಕೊಡುಗೆ ಅಪಾರ. ವಿಜ್ಞಾನ ಹಾಗೂ ತಂತ್ರಜ್ಞಾನದಿಂದ ದೇಶ ಅಭಿವೃದ್ಧಿಯಾಗುತ್ತದೆ. ವಿಜ್ಞಾನ, ತಂತ್ರಜ್ಞಾನದಲ್ಲಿ ಸಂಶೋಧನೆಯ ಜೊತೆಯಲ್ಲಿ ವಿವೇಚನೆ ಮುಖ್ಯ ಎಂದು ಇಸ್ರೋ ಪ್ರಾಧ್ಯಾಪಕ ಪದ್ಮಭೂಷಣ ಡಾ.ಬಿ.ಎನ್ ಸುರೇಶ್ ಹೇಳಿದರು. ಮಿಜಾರಿನಲ್ಲಿರುವ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ರೊಸ್ಟ್ರೂಮ್ ಸ್ಪೀಕರ್ಸ್ ಕ್ಲಬ್ ವತಿಯಿಂದ ಮಂಗಳವಾರ ತಂತ್ರಜ್ಞಾನ ವಿಜ್ಞಾನದಲ್ಲಿ ಸಂಶೋಧನೆ ಬಗ್ಗೆ ಉಪನ್ಯಾಸ ನೀಡಿದರು.

ವಿಜ್ಞಾನದಲ್ಲಿ ಮಾತ್ರ ಸಂಶೋಧನೆ, ಅನ್ವೇಷಣೆ ಮಾಡುವುದಲ್ಲ ಮೊದಲು ನಾವು ನಮ್ಮೊಳಗೆ ಜೀವನಮಟ್ಟ, ಸಾಮಾಜಿಕ ಸುಧಾರಣೆಗಳನ್ನು ಮಾಡಬೇಕು. ಹೊಸ ವಿಚಾರಗಳ ಸಂಶೋಧನೆಯಾಗಬೇಕು. ಗಮನ,ಕುತೂಹಲ, ಅನ್ವೇಷಣೆಯ ಗುಣವಿದ್ದರೆ ಯಾವುದೇ ಸಂಶೋಧನೆ ಸುಲಭ ಸಾಧ್ಯ. ಉತ್ತಮ ಚಿಂತನೆ, ವ್ಯವಸ್ಥಿತ ಯೋಜನೆ ಹಾಗೂ ಮುಖ್ಯವಾಗಿ ಸತತ ಪ್ರಯತ್ನಿವಿದ್ದರೆ ಯಾವುದೇ ಸಂಶೋಧನೆ ವಿಫಲವಾಗಲು ಸಾಧ್ಯವಿಲ್ಲ. ಸಂಶೋದನೆ ಎಂಬುವುದು ಸೃಜನಾತ್ಮಕ ಕೆಲಸ. ಅನ್ವೇಷಣೆ ಎಂದರೆ ಈಗಾಗಲೇ ಅಸ್ತಿತ್ವವಿರುವ ವಿಚಾರವನ್ನು ಉತ್ತಮ ಪಡಿಸುವಿಕೆ ಎಂದರು.
ಬಳಿಕ ವಿದ್ಯಾರ್ಥಿಗಳ ಜೊತೆ ಸಂವಾದಲ್ಲಿ ಪಾಲ್ಗೊಂಡರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಉಪನ್ಯಾಸಕ ರವೀಂದ್ರ ಶೆಣೈ ಕಾರ್ಯಕ್ರಮ ನಿರೂಪಿಸಿದರು.
