ಮೂಡುಬಿದರೆ: ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ವತಿಯಿಂದ ಎರಡು ದಿನಗಳ ಕಾಲ ನಡೆಯುವ ಭೂಸಮಿಕ್ಷೆ ಮತ್ತು ನಕ್ಷೆಯಲ್ಲಿ ಮುಂದುವರಿಕ ತಂತ್ರಗಾರಿಕೆ ಕಾರ್ಯಾಗಾರಕ್ಕೆ ಗುರುವಾರ ಚಾಲನೆ ನೀಡಲಾಯಿತು.
mbd_feb26_3.ಆಳ್ವಾಸ್ನಲ್ಲಿ ರಾಜ್ಯಮಟ್ಟದ ಕಾರ್ಯಗಾರ ಉದ್ಘಾಟನೆ.
ಬೆಂಗಳೂರಿನ ಐ.ಐ.ಎಸ್.ಸಿನ ವಿಜ್ಞಾನಿ ಡಾ.ಟಿ. ವಿ ರಾಮಚಂದ್ರ ಕಾರ್ಯಗಾರ ಉದ್ಘಾಟಿಸಿದರು. ಜ್ಞಾನವೃದ್ಧಿಗೆ ಪೂರಕವಾಗಿ ಕಾರ್ಯಗಾರಗಳು ನಡೆಯಬೇಕು. ಯುವಶಕ್ತಿ ಹಾಗೂ ಸೌರಶಕ್ತಿ ನಮಗೆ ಸಿಕ್ಕಿರುವ ಅಮೂಲ್ಯ ಆಸ್ತಿ. ಅವೆರಡರ ಸಮರ್ಪಕ, ಸಮಯೋಚಿತ ಬಳಕೆಯು ದೇಶದ ಅಭಿವೃದ್ಧಿಗೆ ಕೊಡುಗೆಯನ್ನು ನೀಡುತ್ತದೆ. ಕಲಸಂಪನ್ಮೂಲ ಕೂಡ ಸದ್ಬಳಕೆಯಾಗಬೇಕೆಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು. ಸುರತ್ಕಲ್ ಎನ್ಐಟಿಕೆಯ ಪಾಧ್ಯಾಪಕ ಡಾ. ದ್ವಾರಕೀಶ್ ಜಿ. ಎಸ್ ಮುಖ್ಯ ಅತಿಥಿಯಾಗಿದ್ದರು.
ಕಾರ್ಯಾಗಾರ ಸಂಚಾಲಕ ಪ್ರಾಧ್ಯಾಪಕ ಅಜಿತ್ ಹೆಬ್ಬಾರ್, ಸಹ ಪ್ರಾಧ್ಯಾಪಕ ಸಂಜಯ್ರವರು ಉಪಸ್ಥಿತರಿದ್ದರು.
ದುರ್ಗಾ ಪ್ರಸಾದ್ ಬಾಳಿಗ ಸ್ವಾಗತಿಸಿದರು. ಅಜಿತ್ ಹೆಬ್ಬಾರ್ ವಂದಿಸಿದರು. ಲತಾ ಹರಿದಾಸ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *