ಸುದ್ದಿ9 ಕೀರ್ತಿಎಲ್ಲೆಡೆ ಪಸರಲಿ, ಸದುಪಯೋಗ ಪಡೆಯುವಂತಾಗಲಿ – ವಿವೇಕ ಚೈತನ್ಯಾನಂದ ಸ್ವಾಮೀಜಿ.
ಸುದ್ದಿಕೈಕಂಬ: ಸುದ್ದಿ9 ನೂತನ ವೆಬ್ಸೈಟ್ ಚಾಲನೆ ಮಾಡಿರುವುದು ಖುಷಿ ತಂದಿದೆ. ಇದರ ಕೀತರ್ಿ ಎಲ್ಲೆಡೆ ಪಸರಲಿ ಇದರ ಸದುಪಯೋಗವನ್ನು ಎಲ್ಲರೂ ಪಡೆಯುವಂತಾಗಲಿ ಎಂದು ಪೊಳಲಿ ರಾಮಕೃಷ್ಣ ತಪೋವನದ ವಿವೇಕ ಚೈತನ್ಯಾನಂದ ಸ್ವಾಮೀಜಿ ನುಡಿದರು.
ಅವರು ಗುರುಪುರ ಕೈಕಂಬದಲ್ಲಿ ಸುದ್ದಿ9 ನೂತನ ವೆಬ್ಸೈಟ್ಗೆ ಚಾಲನೆ ನೀಡಿ ಮಾತಾಡುತಿದ್ದರು.
ಸುದ್ದಿ ನೂತನ ವೆಬ್ಸೈಟನ್ನು ಚಾಲನೆ ಮಾಡಲು ನನಗೆ ಹೆಮ್ಮೆ ಎನಿಸಿದೆ. ವಸ್ತುನಿಷ್ಠ ಸುದ್ದಿಯನ್ನು ಪ್ರಸಾರಿಸುವತ್ತ ಸುದ್ದಿ9 ಗಮನ ಹರಿಸಲಿ. ಇದರ ಉಪಯೋಗವನ್ನು ಎಲ್ಲರೂ ಪಡೆಯುವಂತಾಗಲಿ ಎಂದು ಆಶರ್ೀವಚನ ನೀಡಿದರು.
ವೇದಮಂತ್ರಗಳ ಮಂತ್ರೋಚ್ಛಾರದಿಂದ ದೇವರಿಗೆ ದೀಪಬೆಳಗಿ ಪ್ರಾರ್ಥನೆ ಮಾಡಲಾಯ್ತು. ಸುದ್ದಿ9 ಇದರ ಚಾಲನೆಯನ್ನು ಉದ್ಯಮಿ ರಾಜೇಶ್ ಪೈ ಕಂಪ್ಯೂಟರ್ನ ಗುಂಡಿ ಒತ್ತುವ ಮೂಲಕ ಚಾಲನೆ ನೀಡಿದರು. ವೆಬ್ಸೈಟ್ ಕಂಪ್ಯೂಟರ್ ಸ್ಕ್ರೀನಿನ ಮೇಲೆ ಬರುತ್ತಿದ್ದಂತೆ ಎಲ್ಲರೂ ಚಪ್ಪಾಳೆ ತಟ್ಟಿ ಹರ್ಷವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವೆಬ್ಸೈಟ್ ರೂಪಿಸಿದ ಮಧು ಕುಮಾರ್, ಭೂಷನ್, ಕಿರಣ್ ಕುಮಾರ್, ಉದ್ಯಮಿಗಳಾದ ಚಂದ್ರಶೇಖರ್ ಶೆಟ್ಟಿ, ಪತ್ರಕರ್ತ ಸುಖೇಶ್ ಗುರುಪುರ, ರಾಮಪ್ಪ ಪೂಜಾರಿ, ನಾರಾಯಣ ಪೂಜಾರಿ, ಗಿರೀಶ್, ಪ್ರಜ್ವಲ್ ಮತ್ತಿತರರು ಉಪಸ್ತಿತರಿದ್ದರು.
ಚಿತ್ರ: ಸುಖೇಶ್ ಗುರುಪುರ

good luck suddi9