ಸುದ್ದಿ9 ಕೈಕಂಬ: ರ್ಯಾಲಿಯಲ್ಲಿ 750ಕ್ಕು ಹೆಚ್ಚು ಬೈಕ್ ಗಳಲ್ಲಿ ಸಾವಿರಕಿಂತ ಹೆಚ್ಚು ಕಾರ್ಯಕರ್ತರು. ರಾರಾಜಿಸಿದ ಕೇಸರಿ ದ್ವಜಗಳು,
ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂಣೇಶ್ವರೀ ದೇವಸ್ಥಾನದ ವಠಾರದಿಂದ ಹಿಂದೂ ಸಮಾಜೋತ್ಷವದ ಮುನ್ನುಡಿಯಾಗಿ ಫೆ.22ರಂದು ರ್ಯಾಲಿಗೆ ಚಾಲನೆ ನೀಡಲಾಯಿತು. ಹಿಂದೂ ಸಮಾಜೋತ್ಸವದ ಗೌರವಧ್ಯಕ್ಷರಾದ ಶಾಸ್ತವೂ ಭೂತನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯನಾಥ ವಿಠಲಶೆಟ್ಟಿ ರ್ಯಾಲಿಗೆ ಚಾಲನೆ ನೀಡಿದರು.

ವಿಹಿಂಪ ನ ಗುರುಪುರ ಪ್ರಖಂಡ ಸಂಚಾಲಕ ವಿಷ್ಣು ಕಾಮತ್ ಅವರು ವಿ ಹಿಂ ಪ ಬ್ರಹತ್ ದ್ವಜ ಹಸ್ತಾಂತರಿಸಿದರು. ವಿ ಹಿಂ ಪ ಜಿಲ್ಲಾ ಪ್ರಮುಖ ಜಗದೀಶ ಶೇಣವ, ಉದ್ಯಮಿ ಚಂದ್ರಹಾಶ ಕೌಡೂರು, ಬಜಪೆ ವಲಯ ಶಕ್ತಿ ಕೇಂದ್ರದ ಅಧ್ಯಕ್ಷ- ಸಂಚಾಲಕ ನವೀನ್ ಚಂದ್ರ, ಬಜರಂಗಧಳ ಜಿಲ್ಲಾ ಸಂಚಾಲಕ ಭುಜಂಗ ಕುಲಾಲ್, ಜಿಲ್ಲಾ ಪಂ ಸದಸ್ಯ ರೀತೇಶ್ ಶೆಟ್ಟಿ, ಬಜಪೆ ಗ್ರಾಮ ಪಂ ಅಧ್ಯಕ್ಷ ಪ್ರದೀಪ್ ಸುವರ್ಣ ,ಸಂಘಟನೆಗಳ ಪ್ರಮುಖರಾದ ಲೋಕೇಶ್ ಕಜೆ, ಕೃಷ್ಣ ಕಜೆ, ಸತೀಶ್ ದೇವಾಡಿಗ ಮತ್ತಿತರರು ಉಪಸ್ಥಿತರಿದಸ್ದರು.
ರ್ಯಾಲಿ ಸುಂಕದಕಟ್ಟೆ ದೇವಳದ ಅವರಣದಿಂಣದ ಹೊರಟು ಬಜಪೆ ಮುರ ಜಂಕ್ಷನ್ -ಪೆಟ್ರೋಲ್ ಪಂಪ್- ಪೆರಾರ-ಕೈಕಂಬ- ಗುರುಪುರ- ವಾಮಂಜೂರು ಮಾರ್ಗವಾಗಿ ಸಾಗಿ ಮೂಡುಶೆಡ್ಡೆಯಲ್ಲಿ ಸಂಪನ್ನಗೊಂಡಿತು.























