ಬಂಟ್ವಾಳ : ಸುಬ್ರಹ್ಮಣ್ಯ ದೇವಸ್ಥಾನ ಮುಗುಳಿಯ ಸಜಿಪ ಮುನ್ನೂರು ಇದರ ನವೀಕರಣ ಪುನಃಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಹಾಗೂ ಜಾತ್ರಾ ಮಹೋತ್ಸವವು ತಾ.22-02-2015ರಿಂದ 27-02-2015ರ ತನಕ ಜರಗಲಿದ್ದು ಆಪ್ರಯುಕ್ತ 20-02-2015ರಂದು ಅಗ್ರಶಾಲೆಯಲ್ಲಿ ಪಾಕ ಮುಹೂರ್ತದ ಅಂಗವಾಗಿ ಶಾಸ್ತ್ರೋಕ್ತವಾಗಿ ಹಾಲು ಉಕ್ಕಿಸುವ ಮೂಲಕ ಚಾಲನೆ ನೀಡಲಾಯಿತು . ಜೀರ್ಣೋದ್ಧಾರ ಸಮಿತಿ ಸದಸ್ಯರಾದ ಎನ್.ಶಶಿರಾಜ್ ರಾವ್ , ರವೀಂದ್ರ ಕಂಬಳಿ , ನವೀನ್ ಸುವರ್ಣ, ಎಂ.ಮಹಾಬಲ ಕೊಟ್ಟಾರಿ ,ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಜಯಶಂಕರ ಬಾಸ್ರಿತ್ತಾಯ ಅದ್ರುಕ್ಕು , ಸಮಿತಿ ಸದಸ್ಯರಾದ ದೇವಪ್ಪ ಮಡಿವಾಳ , ಎಸ್.ಕೆ.ಶಿವ , ಹರಿಪ್ರಸಾದ್ ಭಂಡಾರಿ , ಕೃಷ್ಣ ಭಟ್ , ಸ್ವಾಗತ ಸಮಿತಿ ಸದಸ್ಯರಾದ ಎನ್.ರಾಮ , ಬಾಲಕೃಷ್ಣ , ಜಗನ್ನಾಥ್ ಶೆಟ್ಟಿ , ದಾಮೋದರ , ಭಾಸ್ಕರ ಬಾಸ್ರಿತ್ತಾಯ , ಧನಂಜಯ ಶೆಟ್ಟಿ , ಸುಪ್ರಭ ಬಾಸ್ರಿತ್ತಾಯ , ಅಶ್ವಿನಿ , ಅಮೃತಾ , ಸ್ನೇಹಾ , ತಾರನಾಥ , ಪದ್ಮನಾಭ ಭಂಡಾರಿ , ಶ್ರೀನಿವಾಸ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು . ಧಾರ್ಮಿಕ ವಿಧಿ ವಿಧಾನಗಳನ್ನು ಎಂ.ಸುಬ್ರಹಣ್ಯ ಭಟ್ ನೆರವೇರಿಸಿದರು .
KAR_2794

By suddi9

Leave a Reply

Your email address will not be published. Required fields are marked *