ಬಂಟ್ವಾಳ: ಪ್ರತಿಷ್ಠಿತ ಸಹಕಾರ ಸಂಸ್ಥೆಗಳಲ್ಲಿ ಒಂದಾದ ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ನಿಯಮಿತ (ಭೂ ಬ್ಯಾಂಕ್)ದ ಆಡಳಿತ ಮಂಡಳಿಯ 12ಮಂದಿ ನಿರ್ದೇಶನ ಸ್ಥಾನಕ್ಕೆ ಒಂದೂವರೆ ದಶಕಗಳ ಬಳಿಕ ಭಾನುವಾರ ಚುನಾವಣೆ ನಡೆಯುತು.
ಅನೇಕ ಮಂದಿಯ ರಾಜಕೀಯ ಬೆಳವಣಿಗೆಗೆ ಕ್ಷೇತ್ರವನ್ನು ಒದಗಿಸಿದ ಬಂಟ್ವಾಳ ಭೂ ಬ್ಯಾಂಕಿನಲ್ಲಿ , ಬಿರುಸಿನ ರಾಜಕೀಯ ಪ್ರಕ್ರಿಯೆಗಳು ನಡೆದು ಬಿ.ಜೆ.ಪಿ.-ಕಾಂಗ್ರೆಸ್ ಮಧ್ಯ ತೀವ್ರ ಹಣಾಹಣಿಗೆ ಅವಕಾಶ ಮಾಡಿಕೊಟ್ಟಿದೆ.
ಒಟ್ಟು 12ಸ್ಥಾನಕ್ಕೆ 24 ಮಂದಿ ಚುನಾವಣಾ ಕಣದಲ್ಲಿ ಸ್ಪರ್ಧಿಸಿದ್ದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಬ್ಯಾಂಕಿನ ಹಾಲಿ ಅಧ್ಯಕ್ಷ ಸುದರ್ಶನ್ ಜೈನ್, ಉಪಾಧ್ಯಕ್ಷ ಸಂಜೀವ ಪೂಜಾರಿ, ಜಿ.ಪಂ.ಸದಸ್ಯ ಚಂದ್ರ ಪ್ರಕಾಶ ಶೆಟ್ಟಿ ಸಹಿತ ಎಲ್ಲಾ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ವಿಜಯಶಾಲಿಯಾದರು.


ಬಿಜೆಪಿಯಿಂದ ಇದೆ ಮೊದಲ ಬಾರಿಗೆ ಬ್ಯಾಂಕಿನ ಎಲ್ಲಾ ನಿರ್ಧೇಶಕ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿತ್ತು. ಆದರೆ ಎಲ್ಲಾ ಸ್ಥಾನಗಳನ್ನು ಕಳೆದುಕೊಳ್ಳುವ ಮೂಲಕ ಮುಖಭಂಗಕ್ಕೀಡಾಯಿತು.
ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್ 238 ತಾ.ಪಂ.ಮಾಜಿ ಸದಸ್ಯ ಗೋಪಾಲ ಕೃಷ್ಣ ಚೌಟ 48. ಸಾಲಗಾರಲ್ಲದ ಕ್ಷೇತ್ರದಲ್ಲಿ ಉಪಾಧ್ಯಕ್ಷ ಸಂಜೀವ ಪೂಜಾರಿ 315 ಎದುರು ಬಿಜೆಪಿ ಯುವ ಮುಖಂಡ ಪ್ರಮೋದ್ ಕುಮಾರ್ ರೈ 153 ಮತಗಳನ್ನು ಪಡೆದಿದ್ದಾರೆ.
ಸಂಗಬೆಟ್ಟು ಕ್ಷೇತ್ರದಲ್ಲಿ ಚಂದ್ರಶೇಖರ್ ಶೆಟ್ಟಿ (ಕಾಂಗ್ರೆಸ್), 125. ನಂದಪ್ಪ ರೈ ಬಿ( ಬಿಜೆಪಿ) 97
ಪಿಲಾತಬೆಟ್ಟು ಮಹಿಳಾ ಮೀಸಲು ಕ್ಷೇತ್ರದಲ್ಲಿ ಪುಷ್ಪಾವತಿ (ಕಾಂಗ್ರೆಸ್),76. ತ್ರಿಶಲ (ಬಿಜೆಪಿ) 58
ಪಾಣೆಮಂಗಳೂರು ಮಹಿಳಾ ಮೀಸಲು ಕ್ಷೇತ್ರದಿಂದ ಸುಜಾತ ರೈ (ಕಾಂಗ್ರೆಸ್)180. ಮೋಹಿನಿ ಜೆ.ಶೆಟ್ಟಿ (ಬಿಜೆಪಿ) 85.
ಸರಪಾಡಿ ಕ್ಷೇತ್ರದಿಂದ ಶಿವಪ್ಪ ಪೂಜಾರಿ (ಕಾಂಗ್ರೆಸ್)116. ಪೂವಪ್ಪ ಪೂಜಾರಿ (ಬಿ.ಜೆ.ಪಿ)67
ಬಿ.ಮೂಡ ಗ್ರಾಮ ಚಂದ್ರಪ್ರಕಾಶ್ ಶೆಟ್ಟಿ 133 (ಕಾಂಗ್ರೆಸ್) ವಿವೇಕಾನಂದ ಆಳ್ವ (ಬಿ.ಜೆ.ಪಿ)63
ಸಜಿಪಪಡು ಪರಮೇಶ್ವರ ಎಂ.(ಕಾಂಗ್ರೆಸ್)131, ಕೃಷ್ಣಪ್ಪ ಬೆಳ್ಚಡ(ಬಿ.ಜೆ.ಪಿ)64
ಪಜೀರು -ಚಂದ್ರಹಾಸ ಕರ್ಕೇರ (ಕಾಂಗ್ರೆಸ್) 157. ರಮೇಶ್ ಶೆಟ್ಟಿ (ಬಿ.ಜೆ.ಪಿ.)22
ಮಾಣಿ ಕ್ಷೇತ್ರದಿಂದ ಮುರಳೀಧರ್ ಶೆಟ್ಟಿ (ಕಾಂಗ್ರೆಸ್)89. ಕೇಶವ ಶೆಟ್ಟಿ (ಬಿಜೆಪಿ)87
ಕೊಳ್ನಾಡು-ರಾಜೇಶ್ ಕುಮಾರ್ (ಕಾಂಗ್ರೆಸ್)156. ಪ್ರಭಾಕರ ಶೆಟ್ಟಿ (ಬಿಜೆಪಿ)56
ಕೇಪು -ಪ.ಜಾ.ಪ.ಪಂ.ಕ್ಷೇತ್ರದಲ್ಲಿ ಹೊನ್ನಪ್ಪ ನಾಯ್ಕ್ (ಕಾಂಗ್ರೆಸ್)70. ಕೃಷ್ಣ ನಾಯಕ್ (ಬಿಜೆಪಿ)39 ಮತಗಳನ್ನು ಪಡೆದಿದ್ದಾರೆ
