ಸುದ್ದಿ9 ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ತೋಟಗಾರಿಕಾ ಇಲಾಖೆ, ಸಿರಿ ತೋಟಗಾರಿಕಾ ಸಂಘದ ಸಂಯುಕ್ತ ಆಶ್ರಯದಲ್ಲಿ ಕದ್ರಿ ಉದ್ಯಾನವನದಲ್ಲಿ ಫೆ. 14ರಿಂದ ನಾಲ್ಕುದಿನಗಳ ಕಾಲ ಫಲಪುಷ್ಪ ಪ್ರದರ್ಶನ ನಡೆಯಲಿದೆ ಎಂದು ತೋಟಗಾರಿಕಾ ಇಲಾಖಾ ಉಪನಿರ್ದೇಶಕ ಯೋಗೇಶ್ ಹೆಚ್ ಆರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಫೆ. 14ರಿಂದ 17ರವರೆಗೆ ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ಹೇಳಿದ್ದರು.
ಫಲಪುಷ್ಪ ಪ್ರದರ್ಶನದಲ್ಲಿ ಸುಮಾರು 70 ಮಳಿಗೆಗಳಿಗೆ ಅವಕಾಶ ನೀಡಲಾಗಿದೆ. ಭಾರತದ ಮಂಗಳಯಾನದ ಯಶಸ್ಸನ್ನು ನೆನಪಿಸುವ ಉದ್ದೇಶದಿಂದ ಸುಮಾರು 12-15 ಸಾವಿರ ಡಚ್ ಗುಲಾಬಿಗಳನ್ನು ಬಳಸಿ, ಮಂಗಳಯಾನದ ಮಾದರಿಯನ್ನು ರಚಿಸಲಾಗುವುದು.

ಸುದ್ದಿಗೋಷ್ಟಿಯಲ್ಲಿ ಸಿರಿ ತೋಟಗಾರಿಕಾ ಸಂಘದ ಪದಾಧಿಕಾರಿಗಳಾದ ಲಕ್ಷ್ಮೀರಾವ್ ಆರೂರು, ನೇಮಿರಾಜ್ ಕೊಂಡೆ, ಎನ್‍ವಿಕೆ ಪಟ್ರಕೋಡಿ, ಶಾರದಾ ಆಚಾರ್, ಜುಡಿತ್ ಮಸ್ಕರೇನ್ಹಸ್ ಇನ್ನಿತರರು ಹಾಜರಿದ್ದರು.


