ಉಳ್ಳಾಲ : ಸಮುದಾಯದೊಳಗಿನ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ಹಾಗೂ ಗ್ರಾಮೀಣ ಆಟಗಳನ್ನು ನೆನಪಿಸುವಂತಹ ಕಾರ್ಯ ಶ್ಲಾಘನೀಯ ಎಂದು ಅಮ್ಮೆಂಬಳ ಸೇವಾ ಸಹಕಾರಿ ಬ್ಯಾಂಕ್ನ ನಿರ್ದೇಶಕ ಹಾಗೂ ಗಟ್ಟಿ ಸಮಾಜ ಅಮ್ಮೆಂಬಳ ಮಾಗಣೆ ಗುರಿಕಾರ ಕಿರಣ್ದಾಸ್ ಗಟ್ಟಿ ಅಬಿಪ್ರಾಯಪಟ್ಟರು.
ಅವರು ಗಟ್ಟಿ ಸಮಾಜ ವಿದ್ಯಾರ್ಥಿ ಯುವ ವೇದಿಕೆ ಮಂಗಳೂರು ಇದರ ಆಶ್ರಯದಲ್ಲಿ ಬಾನುವಾರ ಕೋಟೆಕಾರು ಸೋವೂರು ಗಟ್ಟಿಲೆ ಮೂಲೆಯಲ್ಲಿ ನಡೆದ ` ಸೋವೂರುದ ಕಂಡಡೊಂಜಿ ದಿನ’ ಗಟ್ಟಿಲೆ ಜೋಕುಲೆ ಗೊಬ್ಬು ಗ್ರಾಮೀಣ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಕ್ಷಗಾನ ಕಲಾವಿದ ಬಾಬು ಗಟ್ಟಿ ಸೋವೂರು ವಹಿಸಿ ನಶಿಸುತ್ತಿರುವ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ಅಗತ್ಯ. ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಾನಸಿಕವಾಗಿ ಬಲಿಷ್ಠರಾಗಲು ಸಾಧ್ಯ ಎಂದರು.
ಪ್ರಗತಿಪರ ರೈತರಾದ ಸೇಸಪ್ಪ ಗಟ್ಟಿ ಸೋವೂರು, ಚಂದು ಗಟ್ಟಿ ಸೋವೂರು, ಶಾರದಾ ರೆಸಿಡೆನ್ಶಿಯಲ್ ಶಾಲೆ ಉಡುಪಿ ಇದರ ಪ್ರಾಧ್ಯಾಪಕಿ ವಿದ್ಯಾಗಟ್ಟಿ ಕುಂಬಳೆ, ಗಟ್ಟಿ ಸಮುದಾಯ ವಿದ್ಯಾರ್ಥಿ ಯುವ ವೇದಿಕೆಯ ಅಧ್ಯಕ್ಷೆ ಆನಿತಾ ಗಟ್ಟಿ, ಪ್ರ. ಕಾರ್ಯದರ್ಶಿ ಸುನಿಲ್ ಗಟ್ಟಿ ಕೋಟಿಪದವು, ಸಂಘಟಕರಾದ ಮನೋಜ್ ಗಟ್ಟಿ ಕೋಟೆಕಾರು, ಚರಣ್ರಾಜ್ ಗಟ್ಟಿ ಸೋವೂರು, ಗಣೇಶ್ ಗಟ್ಟಿ ಪಡುಮನೆ ಕುಂಬಳೆ, ದೀಪಕ್ ಗಟ್ಟಿ ಕೋಟೆಕಾರು, ಕಿಶನ್ ಗಟ್ಟಿ ಗುರುಪುರ, ರಮ್ಯ ಗಟ್ಟಿ ಬಜಾಲ್, ಅಶ್ವಿಜ ಗಟ್ಟಿ ತೊಕ್ಕೊಟ್ಟು, ಉಪಾಧ್ಯಕ್ಷ ಕಿಶೋರ್ ಗಟ್ಟಿ ಕುಂಬಳೆ, ಕ್ರೀಡಾ ಕಾರ್ಯದರ್ಶಿಗಳಾದ ಅಶ್ವಿತ ಗಟ್ಟಿ ಬಜಾಲ್, ಕೌಶಲ್ಯ ಗಟ್ಟಿ ಪಿಲಾರ್ , ಯಶಸ್ಮಿತ ಗಟ್ಟಿ ಕೋಟೆಕಾರು ಉಪಸ್ಥಿತರಿದ್ದರು.
ರಾಜೇಶ್ ಗಟ್ಟಿ ಪಿಲಾರ್ ಮತ್ತು ಸೋಮನಾಥ ಸೇವಾ ಸಮಿತಿಯ ಅಧ್ಯಕ್ಷ ಕೃಷ್ಣಪ್ಪ ಗಟ್ಟಿ ಕೋಟೆಕಾರು ಭಾಗವಹಿಸಿದ್ದರು.
(ಚಿತ್ರಗಳು: ಮೋಹನ್ ಕುತ್ತಾರ್ )







