ಬೆಂಗಳೂರು: ಬೆಂಗಳೂರಿನ ಬಸವನ ಗುಡಿಯ ನ್ಯಾಶನಲ್ ಕಾಲೇಜ್ ಮೈದಾನದಲ್ಲಿ ನಡೆಯಲಿರುವ ವಿರಾಟ್ ಹಿಂದೂ ಸಮಾವೇಶದಲ್ಲಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಭಾಷಣ ಮಾಡಲಿದ್ದ ವಿಹಿಂಪ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ಭಾಯ್ ತೊಗಾಡಿಯಾಗೆ ಪೊಲೀಸ್ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ವಾಪಾಸ್ ಹೋಗಿದ್ದಾರೆ.

Bhaiyyaji-Joshi
ಇಂದು ಬೆಳಿಗ್ಗೆ ಬೆಂಗಳೂರಿನ ಹೊಸೂರಿಗೆ ಆಗಮಿಸಿದ್ದ ತೊಗಾಡಿಯಾ ತನ್ನ ಕೆಲಸ ಕಾರ್ಯ ಮುಗಿಸಿ ವಿಮಾನದ ಮೂಲಕ ಅಹಮದಾಬಾದ್‍ಗೆ ತೆರಳಿದ್ದಾರೆ.
ಹಾಗಾದರೆ ಪ್ರಮುಖ ಭಾಷಣ ಮಾಡುವವರು ಯಾರು?
ತೊಗಡಿ ಆಗಮನವಾಗದ ಹಿನ್ನೆಲೆಯಲ್ಲಿ ಸಂಘಪರಿವಾರ ತೊಗಡಿಯಾರಷ್ಟೇ ಪವರ್‍ಫುಲ್ ಆಗಿ ಭಾಷಣ ಮಾಡಲಿರುವ ವ್ಯಕ್ತಿಯೊಂದನ್ನು ಹುಡುಕಿದ್ದು, ಆರ್‍ಎಸ್‍ಎಸ್‍ನ ರಾಷ್ಟ್ರೀಯ ಸಹ ಕಾರ್ಯದರ್ಶಿ ಭಯ್ಯಾಜಿ ಜೋಷಿ ಪ್ರಧಾನ ಭಾಷಣ ಮಾಡಲಿದ್ದಾರೆ ಎನ್ನಲಾಗಿದೆ.
ಇಂದು ಸಂಜೆ ಈ ಸಮಾವೇಶ ನಡೆಯಲಿದ್ದು ಲಕ್ಷಕ್ಕಿಂತಲೂ ಅಧಿಕ ಜನರನ್ನು ನಿರೀಕ್ಷಿಸಲಾಗಿದೆ. ಈ ನಡುವೆ ಖಾಕಿ ಪಡೆ ಬಿಗಿ ಪಹರೆ ನಡೆಸುತ್ತಿದೆ.

By suddi9

Leave a Reply

Your email address will not be published. Required fields are marked *