ಮೂಡುಬಿದರೆ: ಪರಿಸರದ ಬಗ್ಗೆ ಕಾಳಜಿಯಿಂದ ಪ್ಲಾಸ್ಟಿಕ್ ನಿಷೇಧ ಘನತ್ಯಾಜ್ಯಗಳ ನಿರ್ವಹಣೆ ಸಹಿತ ನೈಸಗರ್ಿಕ ಸಂಪನ್ಮೂಲಗಳನ್ನು ಉಳಿಸಿ, ಪರಿಸರ ಸಂರಕ್ಷಣೆ ಮಾಡಿದರೆ ಮಾತ್ರ ಈಗಾಗಲೇ ಕಾಡುತ್ತಿರುವ ಪರಿಸರ ಮಾಲಿನ್ಯಗಳ ನಿಯಂತ್ರಣಕ್ಕೆ ತರಬಹುದು. ಮಾಲಿನ್ಯರಹಿತ ಪರಿಸರ ಮುಂದಿನ ಪೀಳಿಗೆಗೆ ನಾವು ಕೊಡುವ ದೊಡ್ಡ ಕೊಡುಗೆ ಎಂದು ಮೈಸೂರು ಲ್ಯಾಬ್ಲೇಂಡ್ ಬಯೋಟೆಕ್ನ ಡಾ.ಗೀತಾ ಸಿಂಗ್ ಹೇಳಿದರು.
mbd_feb6_1 (2)

mbd_feb6_1 (1)
ಆಳ್ವಾಸ್ ಕಾಲೇಜಿನ ಜೀವತಂತ್ರ ಜ್ಞಾನ ವಿಭಾಗ ಕನರ್ಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಂಗಳೂರು ಸಹಯೋಗದೊಂದಿಗೆ ಎರಡು ದಿನಗಳ ಕಾಲ ನಡೆಯುವ `ಪರಿಸರ ಜೀವತಂತ್ರ ಜ್ಞಾನದಲ್ಲಿನ ಇತ್ತೀಚಿನ ಬೆಳವಣಿಗೆಗಳು ಮತ್ತು ನಿರ್ವಹಣೆ’ ಎಂಬ ವಿಷಯದ ಕುರಿತು ಎರಡು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಡಾ.ವಿ.ಎಸ್.ಆಚಾರ್ಯ ಸಭಾಭವನದಲ್ಲಿ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿರುವ ಮಾನವ ನಿಮರ್ಿತ ವಸ್ತುಗಳಿಂದ ಪರಿಸರದ ನೈಜ್ಯ ಸೌಂದರ್ಯ ವಿರೂಪಗುಳ್ಳುತ್ತಿದೆ. ಇದು ನೈಸಗರ್ಿಕ ಸಂಪನ್ಮೂಲಗಳನ್ನು ಕೊಳ್ಳೆಹೊಡೆದಿದೆ. ಅದುನಿಕ ತಂತ್ರಜ್ಞಾನಗಳನ್ನು ಬಳಸಿ ಮಾಲಿನ್ಯ ನಿಯಂತ್ರಣ ಮಾಡುವುದು ಅವಶ್ಯಕ ಎಂದರು.
ಕನರ್ಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಂಗಳೂರು ಉಪ ಪರಿಸರ ಅಧಿಕಾರಿ ಎಚ್.ಲಕ್ಷ್ಮೀಕಾಂತ್ ವಿಚಾರಸಂಕಿರಣದ ಪ್ರಬಂಧಗಳ ಸಂಚಿಕೆ `ಅಬ್ಸ್ಟ್ರಕ್’ ಬಿಡುಗಡೆಗೊಳಿಸಿದರು. ಅವಿವೇಕದ ಅತಿರೇಕದಿಂದ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ಗಳನ್ನು ಬಳಸುತ್ತಿರುವುದರಿಂದ ಪರಿಸರ ಮಾತ್ರವಲ್ಲ ಇತರ ಜೀವಿಗಳನ್ನು ನಾಶಗೊಳಿಸುತ್ತಿದ್ದೇವೆ ಎಂದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಉದ್ಘಾಟನಾ ಸಮಾರಂಭ ಅಧ್ಯಕ್ಷತೆ ವಹಿಸಿದ್ದರು. ವಿಚಾರ ಸಂಕಿರಣದ ಸಂಯೋಜಕ ಡಾ.ರಾಮ ಭಟ್ ಪಿ. ಸ್ವಾಗತಿಸಿದರು. ಗಗನಾ ಕಾರ್ಯಕ್ರಮ ನಿರೂಪಿಸಿದರು. ಶ್ರೀನಿಧಿ ಶೆಟ್ಟಿ ವಂದಿಸಿದರು.
ವಿಚಾರಸಂಕಿರಣದ ಮೊದಲ ದಿನ ಜೀವ ತಂತ್ರಜ್ಞಾನ ತಜ್ಞ ಬೆಂಗಳೂರಿನ ಐಐಎಸ್ಸಿಯ ಡಾ.ಹರೀಶ್ ಆರ್.ಭಟ್, ಡಾ.ಆರ್.ರಘುನಾಥನ್ ಚೆನ್ನೈ, ,ಮಂಗಳೂರು ಕೆ.ಎಂ.ಸಿ. ಯ ಡಾ.ಇಥೆಲ್ ಸುಮನ್, ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಡಾ.ಸಿ.ವಾಮನ ರಾವ್ ಸಂಪನ್ಮೂಲ ವ್ಯಕ್ತಿಯಾಗಿದ್ದರು.
..

By Suddi9

Leave a Reply

Your email address will not be published. Required fields are marked *