ಸುದ್ದಿ9 ಬಂಟ್ವಾಳ: ಬಂಟ್ವಾಳ ಪೇಟೆಯಲ್ಲಿ ಸುಮಾರು 100 ವರ್ಷಗಳ ಹಿನ್ನೆಲೆ ಹೊಂದಿರುವ ಬೋರ್ಡ್ ಶಾಲೆಯಲ್ಲಿ ಬಾಲ್ಯದಲ್ಲಿ ಸುಮಾರು ಐದಾರು ವರ್ಷ ಓದಿದ್ದ ನೆನಪಿನ ಹಿನ್ನೆಲೆಯಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಬುಧವಾರ ಇಲ್ಲಿಗೆ ಭೇಟಿ ನೀಡಿದರು.
ಪ್ರಸಕ್ತ ಸರ್ಕಾರಿ ಪಾಲಿಟೆಕ್ನಿಕ್ ಆಗಿ ಪರಿವರ್ತನೆಗೊಂಡಿರುವ ಈ ಹಳೆ ಕಟ್ಟಡ ಬ್ರಿಟೀಷರಿಂದ ನಿರ್ಮಿಸಲಾಗಿದೆ ಎನ್ನಲಾಗುತ್ತಿದ್ದು, ತನ್ನ ಬಾಲ್ಯದಲ್ಲಿ ಇಲ್ಲಿನ ಜಯರಾಮ ಶೆಟ್ಟಿ ಎಂಬ ಎತ್ತರ ದೇಹದ ವ್ಯಕ್ತಿ ನನಗೆ ಶಿಕ್ಷಕರಾಗಿದ್ದರು ಎಂದು ಡಾ.ಹೆಗ್ಗಡೆ ನೆನಪಿಸಿಕೊಂಡರು.
ಸಂಸ್ಥೆ ಪ್ರಾಚಾರ್ಯ ಕೆ.ಸುನಿಲ್, ರಿಜಿಸ್ಟ್ರಾರ್ ನಮಿತ, ಅಧೀಕ್ಷಕಿ ಒಫಿಲಿಯಾ ಡಿಸೋಜ, ಡಾ.ಎಚ್.ಸಿ.ಚಿನ್ನಗಿರಿ ಗೌಡ, ದೇವರಾಜ್, ಬಂಟ್ವಾಳ ಮಹಾಲಿಂಗೇಶ್ವರ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ರಮೇಶಾನಂದ ಸೋಮಯಾಜಿ, ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ವಕೀಲ ಅಶೋಕ ಕುಮಾರ್ ಬರಿಮಾರು ಮತ್ತಿತರರು ಇದ್ದರು.

