ಬಂಟ್ವಾಳ : ಸತ್ಯ ಸರಣಿಯಲ್ಲಿ ಮುನ್ನುಗ್ಗುತ್ತಿರುವ ಸಮಸ್ತ ಪಂಡಿತರ ಮರಣವನ್ನೂ ಅಣಕಿಸುವ ಮಂದಿಗೆ ತಂಙಳ್ ಆದರೂ ಕುರ್ಆನ್ ಆದೇಶಿಸಿದ ಪ್ರಕಾರ ಪ್ರತಿಕ್ರಯಿಸುವುದು ಸಮಸ್ತ ಕಾರ್ಯಕರ್ತರಿಗೆ ಅನಿವಾರ್ಯವಾಗಿದೆ. ಅದು ಬಿಟ್ಟು ಮೌನ ವಹಿಸಿ ಸಮುದಾಯ ವಂಚಿಸುವುದು ಸಾಧ್ಯವಿಲ್ಲ ಎಂದು ಎಸ್ಕೆಎಸ್ಎಸ್ಎಫ್ ಮುಖಂಡ ಮುಹಮ್ಮದ್ ರಾಮಂದಳಿ ಹೇಳಿದರು.

ಎಸ್ಕೆಎಸ್ಎಸ್ಎಫ್ ನಂದಾವರ ಶಾಖಾ ವತಿಯಿಂದ ಎಸ್ಕೆಎಸ್ಎಸ್ಎಫ್ ಸಿಲ್ವರ್ ಜ್ಯುಬಿಲಿ ಗ್ರಾಂಡ್ ಫಿನಾಲೆ ಕಾರ್ಯಕ್ರಮದ ಪ್ರಚಾರಾರ್ಥವಾಗಿ ನಂದಾವರ ಜಂಕ್ಷನ್ನ ಮರ್ಹೂಂ ಶೈಖುನಾ ಕಾಳಂಬಾಡಿ ಉಸ್ತಾದ್ ವೇದಿಕೆಯಲ್ಲಿ ನಡೆದ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು ಧಾಮರ್ಿಕ ಪಂಡಿತರ ಅವಹೇಳನ ಸಮಸ್ತದ ಸಂಸ್ಕಾರವಲ್ಲ. ಗುರು ಹಿರಿಯರನ್ನು ಗೌರವಿಸುವುದು ಹಾಗೂ ಸತ್ಯವನ್ನು ಸಮುದಾಯದ ಮುಂದೆ ಪ್ರಸ್ತುತ ಪಡಿಸುವುದು ಸಮಸ್ತ ಸಂಘಟನೆಯ ಮುಖ್ಯ ಧ್ಯೇಯವಾಗಿದೆ ಎಂದರು.
ಸಯ್ಯಿದ್ ಬಾತಿಷ್ ತಂಙಳ್ ಉದ್ಘಾಟಿಸಿದರು. ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ಮುತ್ತುಕೋಯ ತಂಙಳ್ ಅಡ್ಯಾರ್-ಕಣ್ಣೂರು ದುವಾಶಿರ್ವಚನಗೈದರು. ನಂದಾವರ ಕೇಂದ್ರ ಜುಮಾ ಮಸೀದಿ ಖತೀಬ್ ಹಾಜಿ ಎನ್.ಎಚ್. ಆದಂ ಫೈಝಿ ಪ್ರಸ್ತಾವನೆಗೈದರು. ಮುಖ್ಯ ಅತಿಥಿಗಳಾಗಿ ಸಯ್ಯಿದ್ ಅಮೀರ್ ತಂಙಳ್ ಕಿನ್ಯ, ಸಯ್ಯಿದ್ ಎ.ಪಿ. ಮುಹಮ್ಮದ್ ತಂಙಳ್ ಕೋಟೆ, ಹಾಜಿ ಅಬ್ದುಲ್ ರಝಾಕ್ ಮಲೇಶ್ಯಾ, ಸಮಸ್ತ ಕೇರಳ ಇಸ್ಲಾಮಿಕ್ ಮತ ವಿದ್ಯಾಭ್ಯಾಸ ಬೋಡರ್್ ಸದಸ್ಯರಾದ ಇಸ್ಮಾಯಿಲ್ ಹಾಜಿ ಕಲ್ಲಡ್ಕ, ಅಬೂಬಕ್ಕರ್ ಹಾಜಿ ಗೋಳ್ತಮಜಲು, ನಂದಾವರ ಮಸೀದಿ ಅಧ್ಯಕ್ಷ ಎನ್. ಅಬ್ದುಲ್ ಮಜೀದ್, ಹುಸೈನ್ ದಾರಿಮಿ ರೆಂಜಲಾಡಿ, ಸಜಿಪಮುನ್ನೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಯೂಸುಫ್ ಕರಂದಾಡಿ, ಬಂಟ್ವಾಳ ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಹಾರೂನ್ ರಶೀದ್ ಬಂಟ್ವಾಳ, ಜಿಲ್ಲಾ ವಕ್ಫ್ ಬೋಡರ್್ ಮಾಜಿ ಅಧ್ಯಕ್ಷ ಉಸ್ಮಾನ್ ಹಾಜಿ ಪಾಣೆಮಂಗಳೂರು, ಗೂಡಿನಬಳಿ ಮಸೀದಿ ಕಾರ್ಯದಶರ್ಿ ಹಾಜಿ ಜಿ ಉಬೈದುಲ್ಲಾ, ಮಜೀದ್ ಫೈಝಿ ನಂದಾವರ ಮೊದಲಾದವರು ಉಪಸ್ಥಿತರಿದ್ದರು.
ನಂದಾವರ ಎಸ್.ಕೆ.ಎಸ್.ಎಸ್.ಎಫ್. ಶಾಖಾಧ್ಯಕ್ಷ ಆರಿಫ್ ನಂದಾವರ, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಕಲಂದರ್ ಶಾಫಿ ಮೊದಲಾದವರು ಉಪಸ್ಥಿತರಿದ್ದರು. ಸಜಿಪ ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಅಶ್ಫಾಕ್ ಫೈಝಿ ನಂದಾವರ ಸ್ವಾಗತಿಸಿದರು. ಮದ್ರಸ ವಿದ್ಯಾಥರ್ಿ ಮುಹಮ್ಮದ್ ದಾವೂದ್ ಕಿರಾಅತ್ ಪಠಿಸಿದರು. ಅಬ್ಬೋನು ನಂದಾವರ ಸ್ವಾಗತ ಗೀತೆ ಹಾಡಿದರು. ಇಪರ್ಾನ್ ಮೌಲವಿ ಕಲಾಯಿ ಕಾರ್ಯಕ್ರಮ ನಿರೂಪಿಸಿದರು.
