ಸುರತ್ಕಲ್: ನಂಬರ್ ಪ್ಲೇಟ್ ಇಲ್ಲದೆ ಬಾಡಿಗೆ ಮೂಲಕ ಹಣ ಮಾಡುತ್ತಿದ್ದ ರಿಕ್ಷಾವನ್ನು ರಿಕ್ಷಾ ಚಾಲಕರೆಲ್ಲ ಸೇರಿ ಹಿಡಿದು ಸುರತ್ಕಲ್ ಠಾಣೆಗೆ ಒಪ್ಪಿಸಿದರೂ ಪೊಲೀಸರು ಮಾತ್ರ ಯಾವುದೇ ಕ್ರಮ ಕೈಗೊಳ್ಳದೆ ರಿಕ್ಷಾವನ್ನು ಅದರ ವಾರೀಸುದಾರನಿಗೆ ಒಪ್ಪಿಸಿದ ಘಟನೆ ಇಂದು ನಡೆದಿದೆ. ಈ ಘಟನೆಗೆ ಸಾರ್ವಜನಿಕರಿಂದ ತೀವ್ರ ಖಂಡನೆ ವ್ಯಕ್ತವಾಗಿದೆ.

rika
ಸುರತ್ಕಲ್ ಪರಿಸರದಲ್ಲಿ ನಂಬರ್ ಪೇಟ್ ಇಲ್ಲದೆ ರಿಕ್ಷಾಗಳು ಓಡುತ್ತಿದ್ದವು. ಅವುಗಳನ್ನೆಲ್ಲಾ ನಿನ್ನೆ ರಿಕ್ಷಾ ಚಾಲಕರೆಲ್ಲಾ ಸೇರಿ ಹಿಡಿದು ಪೊಲೀಸರಿಗೊಪ್ಪಿಸಿದ್ದರು. ಆ ವೇಳೆ ಎಸ್ ಐ ಇಲ್ಲದ ಕಾರಣ ಇತರ ಪೊಲೀಸರು ರಿಕ್ಷಾವನ್ನು ಠಾಣೆಯಲ್ಲೇ ಇರಿಸಿದ್ದರು. ಆದರೆ ಇಂದು ರಿಕ್ಷಾದ ವಾರೀಸುದಾರನೊಬ್ಬ ಬಂದು ಆ ರಿಕ್ಷಾ ತನ್ನದು ಎಂದು ಹೇಳಿದ. ಈ ಮಾತನ್ನು ಕೇಳಿದ ಇನ್ಸ್‍ಪೆಕ್ಟರ್ ವಶಪಡಿಸಿಕೊಂಡಿದ್ದ ರಿಕ್ಷಾವನ್ನು ಆತನಿಗೆ ವಾಪಾಸ್ ನೀಡಿದ್ದಾರೆ.
ಆದರೆ ರಿಕ್ಷಾದ ದಾಖಲೆಯನ್ನು ಸರಿಯಾಗಿ ವಿಚಾರಿಸದೆ ಅದನ್ನು ವಾಪಸ್ ಕೊಟ್ಟಿರುವುದು ರಿಕ್ಷಾ ಚಾಲಕರು ಮತ್ತು ಕೆಲ ಸಂಘಟನೆಗಳಿಗೆ ಆಕ್ರೋಶ ಉಂಟುಮಾಡಿದೆ. ಈ ಪ್ರಕರಣದ ಹಿಂದೆ ರಾಜಕಾರಣಿಗಳ ಕೈವಾಡವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಇದನ್ನೆಲ್ಲಾ ಗಮನಿಸಿದ ಪೊಲೀಸರು ಆ ರಿಕ್ಷಾವನ್ನು ದಾಖಲೆ ಪರೀಕ್ಷೆಗಾಗಿ ಮತ್ತೆ ಠಾಣೆಗೆ ತಂದಿಡುವಂತೆ ಪೆÇಲೀಸರು ಸೂಚಿದ್ದಾರೆ ಎಂದು ತಿಳಿದುಬಂದಿದೆ.

By suddi9

Leave a Reply

Your email address will not be published. Required fields are marked *