ಮಂಗಳೂರು: ಆಂತರಿಕ ಕಲಹ ವನ್ನೇ ಕಾರಣವಾಗಿಸಿ ತಂಡವೊಂದು ಯುವಕನಿಗೆ ಬಸ್‍ನಲ್ಲೇ ಚೂರಿಯಿಂದ ಇರಿದು ಹಲ್ಲೆ ನಡೆಸಿದ ಘಟನೆ ಶುಕ್ರವಾರ ನಗರದ ಬಲ್ಮಠದಲ್ಲಿ ಸಂಭವಿಸಿದೆ.

balmatta
ಗಾಯಾಳು ಯುವಕನನ್ನು ಮುಝಮ್ಮಿಲ್ (22) ಎಂದು ಗುರುತಿ ಸಲಾಗಿದೆ. ಈತ ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದು ಶುಕ್ರವಾರ ಬಸ್‍ನಲ್ಲಿ ತೆರಳುತ್ತಿದ್ದ ವೇಳೆ ಮತ್ತೋರ್ವ ಯುವಕ ಈತನ ಮುಖದ ಹತ್ತಿರ ಕೈಯಿಟ್ಟಿದ್ದು ತೆಗೆಯುವಂತೆ ಮುಝ ಮ್ಮಿಲ್ ಹೇಳಿದಾಗ ಅಷ್ಟು ಸಮಸ್ಯೆ ಯಾಗುವುದಾದರೆ ಬೇರೆ ಕಡೆ ಹೋಗಿ ನಿಲ್ಲುವಂತೆ ಆ ಯುವಕ ಸೂಚಿಸಿದ ಎಂದು ತಿಳಿದುಬಂದಿದೆ. ಈ ವೇಳೆ ಮಾತಿಗೆ ಮಾತು ಬೆಳೆದಾಗ ಇತರ ಆರು ಯುವಕರು ಸೇರಿಕೊಂಡು ಮುಝ ಮ್ಮಿಲ್‍ಗೆ ಹಲ್ಲೆ ನಡೆಸಿ ಚೂರಿಯಿಂದ ಹೊಟ್ಟೆ ಮತ್ತು ಭುಜಕ್ಕೆ ಇರಿದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆರೋಪಿಗಳನ್ನು ಸಚಿನ್, ಸಜಿತ್, ವರುಣ್, ದೀಪಕ್, ಚೇತನ್, ಪ್ರದೀಪ್ ಮತ್ತು ಪ್ರಶಾಂತ್ ಎಂದು ಮುಝಮ್ಮಿಲ್ ಗುರುತಿಸಿದ್ದು ಇವರೆಲ್ಲಾ ತನ್ನ ಹೈಸ್ಕೂಲ್ ಸಹಪಾಠಿಗಳೆಂದು ಆತ ಹೇಳಿಕೊಂಡಿದ್ದಾನೆ. ಮುಝಮ್ಮಿಲ್ ಮತ್ತು ಆರೋಪಿ ಯುವಕರು ಪರಸ್ಪರ ಗೆಳೆಯ ರಾಗಿದ್ದು ಪ್ರತಿದಿನ ಸಂಜೆ ವಾಲಿಬಾಲ್ ಆಡುತ್ತಿದ್ದರು ಎಂದು ಹೇಳಲಾಗಿದೆ. ಪ್ರಸ್ತುತ ಘಟನೆಗೆ ಅವರೊಳಗೆ ನಡೆದಿರಬಹು ದಾದ ಆಂತರಿಕ ಕಲಹವೇ ಕಾರಣವಾಗಿರಬಹುದು ಎಂದು ಅನು ಮಾನಿಸಿರುವ ಪೊಲೀಸರು ಮುಝ ಮ್ಮಿಲ್ ಕೂಡಾ ಎಲ್ಲವನ್ನು ಸ್ಪಷ್ಟವಾಗಿ ವಿವರಿಸಿಲ್ಲ ಎಂದು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *