ಮಂಗಳೂರು: ಬೆಸೆಂಟ್ ಸಂಧ್ಯಾ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಹಳೇ ವಿದ್ಯಾರ್ಥಿ ಸಂಘ ಮತ್ತು ವಿದ್ಯಾರ್ಥಿ ಸಂಘ ಹಾಗೂ ಕಸ್ತೂರ್ ಬಾ ಮೆಡಿಕಲ್ ಕಾಲೇಜು ವತಿಯಿಂದ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಅಂತರಾಷ್ಟ್ರೀಯ ಕ್ರೀಡಾಪಟು, ಕಾಲೇಜಿನ ಸಂಚಾಲಕ ನಗರ್ ನಾರಾಯಣ ಶೆಣೈ ಅವರು ಜ. 30ರಂದು ಶುಕ್ರವಾರ ಉದ್ಘಾಟಿಸಿದರು.

ಮುಖ್ಯ ಅತಿಥಿ ಡಾ. ಯಶವಂತ್ ಮಾತನಾಡಿ ರಕ್ತದಾನ ಮಾಡಬೇಕಾದರೆ ಇರಬೇಕಾದ ದೈಹಿಕ ಅರ್ಹತೆಗಳ ಬಗ್ಗೆ ತಿಳಿಸಿದರು, ಒಬ್ಬ ವ್ಯಕ್ತಿ ರಕ್ತದಾನ ಮಾಡಿದ 24 ಗಂಟೆಗಳ ಒಳಗೆ ಕೊಟ್ಟ ರಕ್ತ ಪುನ: ಉತ್ಪತ್ತಿಯಾಗುವುದು. ರಕ್ತದಾನ ಮಾಡಿದ್ದರಿಂದ ನಾಶವಾಗುವ ಎಲ್ಲಾ ಜೀವಕೋಶಗಳು 3 ತಿಂಗಳೊಳಗೆ ಸಹಜ ಸ್ಥಿತಿಗೆ ಬರುತ್ತದೆ ಎಂದು ತಿಳಿಸಿದರು.
ಪ್ರಾಚಾರ್ಯೆ ಡಾ. ಕಾರ್ಮೆಲೀಟಾ ಗೋವಿಯಸ್ ಮಾತನಾಡಿ, ಜನರ ಸಮಾಜ ಸೇವೆಯಿರುವುದು ರಕ್ತದಾನದಲ್ಲಿಯೇ. ರಕ್ತದಾನ ಮಾಡಿದರೆ ಮೂರು ಜೀವಗಳನ್ನು ಉಳಿಸಿದ ನೆಮ್ಮದಿ ಸಿಗುತ್ತದೆ ಎಂದು ಹೇಳಿದರು.
ಎನ್ ಎಸ್ ಎಸ್ ಘಟಕದ ಅಧಿಕಾರಿ ಪ್ರೊ. ವಿಶ್ವನಾಥ್ ಆಚಾರ್ಯನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶರತ್ ಎನ್. ರಾವ್., ಸುಶಾಂತ್ ಜಾದವ್, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುನಿಲ್ ಕುಮಾರ್ , ವಾಣಿಜ್ಯ ಸಂಘದ ಕಾರ್ಯದರ್ಶಿ ಯೋಗೇಶ್ ಶರ್ಮ ಹಾಜರಿದ್ದರು.
