ಮಂಗಳೂರು: ನಗರದ ಇಂಡಿಯಾನ ಹಾಸ್ಪಿಟಲ್ ಆ್ಯಂಡ್ ಹಾರ್ಟ್ ಇನ್‍ಸ್ಟಿಟ್ಯೂಟ್ ವತಿಯಿಂದ ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮಕ್ಕೆ ನಗರದ ಪ್ರೆಸ್‍ಕ್ಲಬ್‍ನಲ್ಲಿ ಮೇಯರ್ ಮಹಾಬಲ ಮಾರ್ಲ ಅವರು ಚಾಲನೆ ನೀಡಿದರು.

indiana  hospital
ಬಳಿಕ ಮಾತನಾಡಿದ ಅವರು, ಮನೆ ಮತ್ತು ಮನಸ್ಸು ಶಾಂತಿಯಿಂದ ಇದ್ದಲ್ಲಿ ಮನುಷ್ಯನಿಗೆ ನಿಷ್ಠೆಯಿಂದ ಕೆಲಸ ಮಾಡಲು ಸಾಧ್ಯ. ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುವ ಪತ್ರಕರ್ತರಿಗೆ ಆರೋಗ್ಯ ತಪಾಸಣೆ ಕಾರ್ಯ ಹಮ್ಮಿ ಕೊಂಡಿರುವುದು ಶ್ಲಾಘನೀಯ ಎಂದರು.
ದೇಶದ ಪ್ರಗತಿಗೆ ಸಂಬಂಧಪಟ್ಟಂತೆ ಪತ್ರಕರ್ತರ ಕೊಡುಗೆ ಹೆಚ್ಚಿನ ರೀತಿ ಯಲ್ಲಿದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮದಲ್ಲಿ ಬರೆಯುವ ಮೂಲಕ ಆಡಳಿತ ನಡೆಸುವವರನ್ನು ಜಾಗೃತರನ್ನಾಗಿಸುವ ಕೆಲಸ ಆಗುತ್ತಿದೆ ಎಂದು ಅವರು ಹೇಳಿದರು. ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ ಯೂಸಫ್ ಕುಂಬ್ಳೆ ಮಾತನಾಡಿ, ಪತ್ರಕರ್ತ ದಂಪತಿ ಮತ್ತವರ ಹೆತ್ತವರು ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬಹುದು ಎಂದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಪ್ರ. ಕಾರ್ಯದರ್ಶಿ ಶ್ರೀನಿವಾಸ ಇಂದಾಜೆ, ಉಪಾಧ್ಯಕ್ಷ ಸುಕೇಶ್ ಶೆಟ್ಟಿ ಉಪಸ್ಥಿತರಿದ್ದರು.
ಆಸ್ಪತ್ರೆಯ ಮಾಧ್ಯಮ ಸಲಹೆಗಾರ ಭಾಸ್ಕರ ಅರಸ್ ಸ್ವಾಗತಿಸಿದರು. ಪ್ರೆಸ್‍ಕ್ಲಬ್ ಅಧ್ಯಕ್ಷ ರಾಮಕೃಷ್ಣ ಆರ್.. ವಂದಿಸಿದರು. ರೆಹಾನ ಕಾರ್ಯಕ್ರಮ ನಿರೂಪಿಸಿದರು.

ಆಸ್ಪತ್ರೆ ದಾಖಲು:
ಫಾರ್ಮೆಸಿ, ಅಂಗಾಂಗ ಕಸಿ ಮತ್ತು ವೈದ್ಯರ ಶುಲ್ಕ ಹೊರತುಪಡಿಸಿ ಒಟ್ಟು ಬಿಲ್ ಮೊತ್ತದ ಮೇಲೆ ನೇರ ಶೇಕಡ 20ರಷ್ಟು ರಿಯಾಯಿತಿಯನ್ನು ಪತ್ರಕರ್ತರು, ಅವರ ಗಂಡ ಅಥವ ಹೆಂಡತಿ, ಹೆತ್ತವರು ಮತ್ತು ಪತ್ರಕರ್ತರು ಶಿಫಾರಸು ಮಾಡುವ ಮಂದಿಗೆ ನೀಡಲಾಗುವುದು.
ಇಂಡಿಯಾನ ಹಾಸ್ಪಿಟಲ್ ಆಂಡ್ ಹಾರ್ಟ್ ಇನ್ಸಿಟ್ಯೂಟ್ ಮಂಗಳೂರು ಪ್ರದೇಶದಲ್ಲಿ ಆಥ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನ ಮತ್ತು ಪರಿಣಿತ ತಜ್ಞರನ್ನು ಹೊಂದಿರುವ ಮುನ್ನೂರು ಬೆಡ್ಡುಗಳಿರುವ ಸುಸಜ್ಜಿತ ಆಸ್ಪತ್ರೆ. ಪ್ರತಿಯೊಂದು ಸ್ಪಷಾಲಿಟಿ ವಿಭಾಗದಲ್ಲೂ ಪೂರ್ಣಕಾಲಿಕ ಅನುಭವಿ ತಜ್ಞರ ನೇತೃತ್ವದ ವೈದ್ಯರ ತಂಡದೊಂದಿಗೆ ವಿಶ್ವದರ್ಜೆ ಸೇವೆ ನೀಡಲು ಆತ್ಯಾದುನಿಕ ತಂತ್ರಜ್ಞಾನ, ವಿಶೇಷ ತರಬೇತಿ ಪಡೆದ ಅರೆವೈದ್ಯಕೀಯ ಸೇವಾ ಸಿಬ್ಬಂದಿ ಮತ್ತು ರಾತ್ರಿ ಹಗಲು 24 ಗಂಟೆ ತುರ್ತು ಸೇವೆ ಸೌಲಭ್ಯವಿದೆ. ಆಸ್ಪತ್ರೆಯಲ್ಲಿ ಎಲ್ಲ ವೈದ್ಯಕೀಯ ತಪಾಸಣೆ ನಡೆಸಲು ಅತ್ಯಂತ ಆಧುನಿಕ ಲ್ಯಾಬ್ ಸರಣಿ ಸೌಲಭ್ಯಗಳಿದ್ದು ಬಯೊ ಕೆಮಿಸ್ಟ್ರಿ, ಸಮಗ್ರ ರಕ್ತಪರೀಕ್ಷೆ, ರಕ್ತ ಮತ್ತು ರಕ್ತದ ಸೆಲ್ ಗಳ ಮರುಪೂರಣ (ಟ್ರಾನ್ಸ್‍ಫ್ಯೂಶನ್ ಮೆಡಿಸಿನ್) ಮತ್ತು ಮೈಕ್ರೊಬಯೊಲಾಜಿ ಪರೀಕ್ಷೆಗಳನ್ನು ನಿಖರವಾಗಿ ನಡೆಸಬಹುದು.

By Suddi9

Leave a Reply

Your email address will not be published. Required fields are marked *