ಅಡ್ಡೂರು-ನಂದ್ಯ ಬ್ರಹ್ಮಕಲಸೋತ್ಸವದಲ್ಲಿ ನಳಿನ್ ನುಡಿ
ಕೈಕಂಬ: ಹಿಂದೂ ಧರ್ಮದ ನಂಬಿಕೆಯಲ್ಲಿ ಯೋಗ ಹಾಗೂ ಭಾಗ್ಯ ಎಂಬ ವಿಚಾರದ ಬಗೆಗಿನ ಪರಿಕಲ್ಪನೆ ಇದೆ. ಗತ ಜನ್ಮದ ಪುಣ್ಯದ ಫಲಗಳು ಯೋಗ ಹಾಗೂ ಭಾಗ್ಯದ ರೂಪದಲ್ಲಿ ಈ ಜನ್ಮದಲ್ಲಿ ಲಭಿಸುತ್ತದೆ ಎಂದು ದ.ಕ ಜಿಲ್ಲಾ ಸಂಸದರಾದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಅವರು ಜ.25ರ ಭಾನುವಾರ ಅಡ್ಡೂರು ನಂದ್ಯ ಪುನ:ಪ್ರತಿಷ್ಠಾ ಬ್ರಹ್ಮಕಲಸೋೀತ್ಸವ, ಹಾಗೂ ಶ್ರೀ ಅರಸು ದ್ಯೆವ, ಶ್ರೀವಯನಾಡು ಕುಲವನ್, ಶ್ರೀ ವಿಷ್ಣುಮೂರ್ತಿ, ಶ್ರೀ ಭಗವತೀ, ಶ್ರೀ ಭದ್ರಕಾಳಿ ಹಾಗೂ ಪರಿವಾರ ದ್ಯೆವಗಳ ಅಡ್ಡೂರು ವರ್ಷಾವಧಿ ಪರ್ವ ಹಾಗೂ ನೇಮೋತ್ಸವದ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮದಲ್ಲಿ ಈ ವಿಚಾರವನ್ನು ಹೇಳಿದ್ದಾರೆ.
1

 

7

 

26vp sabhakaryakrama1
ನಂಂತರ ಮಾತಾಡಿದ ಅವರು ಭಗವಂತ ಎಲ್ಲಾ ಹರಕೆಗಳನ್ನು ಸ್ವೀಕಾರ ಮಾಡುವುದಿಲ್ಲ. ತನ್ನ ಸ್ವೀಕಾರಾರ್ಹ ಹರಕೆಗಳನ್ನು ಆತನೇ ಸ್ವತಃ ನಮ್ಮಿಂದ ಸ್ವೀಕರಿಸಿ ಅದಕ್ಕೆ ಬೇಕಾದ ಪ್ರತಿಫಲವನ್ನು ನೀಡುತ್ತಾನೆ. ಅದೆಲ್ಲಾ ಯೋಗ ಹಾಗೂ ಭಾಗ್ಯದಿಂದ ಸಿಗುವಂತವುಗಳು. ಅಡ್ಡೂರು ಪ್ರದೇಶದಲ್ಲಿ ಸರ್ವರ ಕೂಡುವಿಕೆಯಿಂದ ಇಂದು ಕೇರಳ ಶೈಲಿಯ ದೈವಸ್ಥಾನ ನಿರ್ಮಾಣಗೊಂಡಿದೆ. ಇದೆಲ್ಲಾ ನಮ್ಮೆಲ್ಲಾ ಭಾಗ್ಯ ಎಂದು ಮಾರ್ಮಿಕವಾಗಿ ನುಡಿದರು.
ನಂತರ ಆಶೀರ್ವಚನ ನೀಡಿ ಮಾತಾಡಿದ ಗುರುಪುರದ ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮೀಜಿ, ನಂದ್ಯದಲ್ಲಿ ನಂದಾದೀಪ ನಿರಂತರ ಬೆಳಗುತ್ತಿರಲಿ. ದೈವರ ದೇವರ ಸಾನಿಧ್ಯದಿಂದ ಧರ್ಮಜಾಗೃತಿ ಮೂಡಲಿ. ಈ ಮೂಲಕ ನಮಗೆ ಧರ್ಮ ದೇವರ ಅನುಗ್ರಹ ನಿರಂತರ ಸಿಗುತ್ತಿರಲಿ ಎಂದು ಹೇಳಿದರು.

ಪೊಳಲಿ ಶ್ರೀ ರಾಮಕ್ರಷ್ಣ ತಪೋವನದ ಸ್ವಾಮಿ ವಿವೇಕಚ್ಯೆತನ್ಯಾನಂದ ಅವರ  ಉಪಸ್ಥಿತಿಯಲ್ಲಿ  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಳ್ಳಾಲ ಶ್ರೀ ಚೀರುಂಭ ಭಗವತೀ ತೀಯಾ ಸಮಾಜ ಸೇವಾ ಸಂಘ ಇಲ್ಲಿನ ಅಧ್ಯಕ್ಷರಾದಂತಹ ಶ್ರೀ ಚಂದ್ರಹಾಸ್ ಉಳ್ಳಾಲ್ ವಹಿಸಿದ್ದರು. ಬಂಟ್ವಾಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ಶ್ರೀ ಕ್ಷೇತ್ರ ಪೊಳಲಿಯ ಆಡಳಿತ ಮೊಕ್ತೇಸರ ಡಾ| ಎ.ಮಂಜಯ್ಯ ಶೆಟ್ಟಿ, ದಿ.ಟೈಮ್ಸ್ ಆಫ್ ಇಂಡಿಯ ಮಂಗಳೂರು ಇದರ ಮುಖ್ಯ ಪ್ರಬಂಧಕ ನವನೀತ ಶೆಟ್ಟಿ ಕದ್ರಿ, ಅಡ್ಡೂರು ಸಹರಾ ಇಂಗ್ಲೀಷ್ ಮೀಡಿಯಂ ಸ್ಕೂಲ್ ಅಧ್ಯಕ್ಷ ಯು.ಪಿ.ಇಬ್ರಾಹಿಂ, ಅಡ್ಡೂರಿನ ಉದ್ಯಮಿ ಎ.ಕೆ.ಶೇಖಬ್ಬ. ಭದ್ರಕಾಳಿ ದೇವಸ್ಥಾನದ ಮೊಕ್ತೇಸರ ರಮೇಶ್ ಬೆಂಜನಪದವು, ಉಧ್ಯಮಿ ಉಮೇಶ್ ಸಾಲಿಯಾನ್, ಗೋಪಾಲ ಬೆಂಜನಪದವು  ಧಾರ್ಮಿಕ ಉಪನ್ಯಾಸಕರಾಗಿ ಶ್ರೀ ಭಗವತಿ ಕ್ಷೇತ್ರ ಸಸಿಹಿತ್ಲು ಇದರ ಅಧ್ಯಕ್ಷ ವಾಮನ್ ಮಾಸ್ಟರ್ ಇಡ್ಯಾ, ಪುತ್ತೂರು ಶಶಾಂಕ ನೆಲ್ಲಿತಾಯ , ಅನುವಂಶಿಕ ಆಡಳಿತ  ಮೊಕ್ತೇಸರ ಸುಂದರ ಬೆಲ್ಚಾಡ, ನಂದ್ಯ ಚಿದಾನಂದ ಗುರಿಕಾರ, ಶೇಖರ  ನಂದ್ಯ,  ಮಾದುಕೋಡಿ  ಸುಂದರ ಬೆಲ್ಚಾಡ,  ನಂದ್ಯ ಪ್ರೇಮನಾಥ, ಆಶೋಕ್ ನಂದ್ಯ  ಮುಂತಾದವರು ಉಪಸ್ಥಿತರಿದ್ದರು.

.ಗೌರವಾರ್ಪಣೆ

ವಾಸ್ತು ಶಿಲ್ಪಿ ಪುರುಷೋತ್ತಮ ಆಚಾರ್ಯ ಉಪ್ಪಳ, ಕಾಷ್ಠ ಶಿಲ್ಪಿ ರಾಧಕೃಷ್ಣ ಆಚಾರ್ಯ ಕುಂಜತ್ತೂರು, ಲೋಹ ಶಿಲ್ಪಿ ಟಿ.ವಿ.ಕುಂಞರಾಮನ್ ದಡ್ಡಲ್‍ಕಾಡ್ ಉರ್ವಸ್ಟೋರ್, ದೂಮಪ್ಪ ಮೇಸ್ತ್ರಿ ನೀರುಮಾರ್ಗ, ನವೀನ್ ಮೇಸ್ತ್ರಿ ಪೊಳಲಿ, ಇವರಿಗೆ ಗೌರವಾರ್ಪಣೆ ನೀಡಲಾಯಿತು.

ಸನ್ಮಾನ

ಶ್ರೀ ಭಗವತೀ ಯಕ್ಷಗಾನ ಮೇಳ ಉಳ್ಳಾಲದ ಸಂಚಾಲಕ ಕೆ.ಟಿ. ಗುಜರನ್, ಶ್ರೀ ಕಟೀಲು ಮೇಳದ ಖ್ಯಾತ ಯಕ್ಷಗಾನ ಕಲಾವಿದರು ಬಿ.ಮೋಹನ್ ಕುಮಾರ್, ಅಮ್ಮುಂಜೆ, ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದರು ಶ್ರೀ ಅರವಿಂದ ಬೋಳಾರ್ ಇವರೆಲ್ಲರನ್ನು ಸನ್ಮಾನಿಸಲಾಯಿತು.
ವೆಂಕಟೇಶ ನಾವುಡ ಸ್ವಾಗತಿಸಿ, ರಾಮ್‍ದಾಸ್ ಧನ್ಯವಾದವಿತ್ತರು ಜನಾರ್ಧನ ಅಮ್ಮುಂಜೆ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *