ಪುತ್ತೂರು: ಹಿಂದೂ ಹೃದಯ ಸಂಗಮದ ನಿಮಿತ್ತ ಸಾಧ್ವಿ ಪ್ರಜ್ಞಾಸಿಂಗ್ ಠಾಕೋರ್ ಅವರ ಭಾವಚಿತ್ರವನ್ನು ಅಳವಡಿಸಲಾಗಿದೆ. ಆದರೆ ಸಂಘಟನೆ ಯೊಂದು ಪೊಲೀಸರಿಗೆ ದೂರಿತ್ತ ಮಾತ್ರಕ್ಕೆ ಸಾಧ್ವಿಯ ಕಟೌಟ್ ತೆರವು ಮಾಡುವ ಪ್ರಶ್ನೆಯೇ ಇಲ್ಲ ಎಂದು ಸುವರ್ಣ ಮಹೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ. 

banner
ವಿಶ್ವಹಿಂದು ಪರಿಷದ್‍ನ ಸುವರ್ಣ ಮಹೋತ್ಸವದ ಅಂಗವಾಗಿ ಜ.16 ರಂದು ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ಜರುಗುವ ವಿರಾಟ್ ಹಿಂದೂ ಹೃದಯ ಸಂಗಮ ಪ್ರಯುಕ್ತ ನಿನ್ನೆ ಕರೆಯಲಾದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಈ ರೀತಿ ಸ್ಪಷ್ಟನೆ ನೀಡಿದ್ದಾರೆ.
ನಂತರ ಮಾತಾಡಿದ ಅವರು, ಸಾಧ್ವಿ ಪ್ರಜ್ಞಾಸಿಂಗ್ ರಾಷ್ಟ್ರಪ್ರೇಮಿಯಾಗಿದ್ದು, ಅವರ ವಿರುದ್ಧ ಚಾರ್ಜ್‍ಶೀಟ್ ಆಗ್ಲಿಲ್ಲ. ಅವರು ಯಾವುದೇ ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿಲ್ಲ. ಆಕೆಯನ್ನು ರಾಷ್ಟ್ರದ್ರೋಹಿ ಮದನಿಯೊಂದಿಗೆ ತುಲನೆ ಮಾಡುವುದು ಬೇಡ. ಹಾಕಿದ ಕಟೌಟ್ ತೆರವು ಮಾಡುವ ವ್ಯವಸ್ಥೆ ಇಲ್ಲ. ಕಾರ್ಯಕ್ರಮ ಮುಗಿದ ಮರುದಿನವೇ ಎಲ್ಲಾ ಕಟೌಟ್ ಬ್ಯಾನರ್ ತೆರವುಗೊಳಿಸಲಾಗುವುದು ಎಂದು ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ.
ವಿರಾಟ್ ಹಿಂದೂ ಹೃದಯ ಸಂಗಮದ ಶೋಭಾಯಾತ್ರೆಯು ದರ್ಬೆ ಮತ್ತು ಬೊಳುವಾರಿನಿಂದ ಎರಡು ಭಾಗಗಳಾಗಿ ನಡೆಯಲಿದ್ದು, ಹಿಂದೂ ಸಂಸ್ಕøತಿಯನ್ನು ಬಿಂಬಿಸಿ ಮೆರವಣಿಗೆ ನಡೆಯುವುದು. ಇದರ ಪೂರ್ವಭಾವಿ ಯಾಗಿ ಈಗಾಗಲೇ 7 ಪ್ರಖಂಡಗಳಲ್ಲಿ ಮನೆ ಮನೆ ಸಂಪರ್ಕ, ಕಾರ್ಯಕರ್ತ ರಿಂದ ಬೈಕ್ ರ್ಯಾಲಿಗಳು ನಡೆದಿವೆ. ಪ್ರಚಾರ ಫಲಕ ಮತ್ತು ನಗರದಲ್ಲಿ ಕೇಸರಿ ಬಣ್ಣದಿಂದ ಬಂಟಿಂಗ್ಸ್ ಶೃಂಗರಿಸ ಲಾಗಿದೆ.

By suddi9

Leave a Reply

Your email address will not be published. Required fields are marked *