ಸುದ್ದಿ9 ಕೈಕಂಬ: ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಹಿಂದೂ ಯುವ ತರುಣರಿಂದ ಅಂಡರ್ ಆರ್ಮ್ ಶೈಲಿಯ ಸೂಪರ್ ಸಿಕ್ಷ್ ಕ್ರಿಕೆಟ್ ಪಂದ್ಯಾಟ ವು ಜ.18 ರಂದು ಭಾನುವಾರ ಅಮ್ಮುಂಜೆ ಕ್ರೀಡಾಂಗಣದಲ್ಲಿ ಬೆಲಿಗ್ಗೆ 9 ಗಂಟೆಗೆ ನಡೆಯಲಿದೆ.

ಇದರ ಉಳಿಪಾಡಿಗುತ್ತು ರಾಜೇಶ್ ನಾಕ್ ಉದ್ಘಾಟನೆಯನ್ನು ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಮಾನ್ಯ ಕೊಡ್ಮಾಣ್ ಕಾಂತಪ್ಪ ಶೆಟ್ಟಿ ವಹಿಸಲಿದ್ದಾರೆ. ಬಜರಂಗದಳದ ಜಿಲ್ಲಾ ಸಂಚಾಲಕ ಭುಜಂಗ ಕುಲಾಲ್ ವಿಶ್ವ ಹಿಂದೂ ಪರಿಷತ್ ಬಂಟ್ವಾಳ ಪ್ರಖಂಡ ಕಾರ್ಯದರ್ಶಿ ಸುರೇಶ್ ಸಾಲ್ಯಾನ್ ಬೆಂಜನಪದವು ಬಜ್ಪೆ ಬಜರಂಗದಳದ ಸಂಚಾಲಕ ಸುಶಾಂತ್ ಕೋಟ್ಯಾನ್, ಪೊಳಲಿ ಹಿಂದೂ ಜಾಗರಣಾ ವೇದಿಕೆ ಸಂಚಾಲಕ ಪ್ರೇಮನಾಥ ಶೆಟ್ಟಿ ಪೊಳಲಿ, ಅಮ್ಮುಂಜೆ ಬಿಜೆಪಿ ಅಧ್ಯಕ್ಷ ಜನಾರ್ಧನ ಪೂಜಾರಿ ಬಾರಿಂಜೆ ಇವರು ಬಾಗವಹಿಸುವರು ಎಂದು ಹಿಂದೂ ಯುವ ತರುಣರ ಪ್ರಕಟನೆ ತಿಳಿಸಿದೆ.
