ಸುದ್ದಿ9 ಮೂಡುಬಿದರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ಆಳ್ವಾಸ್ ವರ್ಣವಿರಾಸತ್-2015 ರಾಷ್ಟ್ರೀಯ ಪ್ರಶಸ್ತಿಯನ್ನು ಖ್ಯಾತ ಚಿತ್ರಕಲಾವಿದ ತೋಟ ವೈಕುಂಠಗೆ ಭಾನುವಾರ ಸಂಜೆ ವಿದ್ಯಾಗಿರಿ ಪ್ಯಾಲೇಸ್ ಗ್ರೌಂಡನ ವಿರಾಸತ್ ವೇದಿಕೆಯಲ್ಲಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀಕ್ಷೇತ್ರ ಸುಬ್ರಹ್ಮಣ್ಯದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಮೂಡುಬಿದರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಮಂಗಳೂರು ಪೊಲೀಸ್ ಆಯುಕ್ತ ಮುರುಗನ್, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ನಿಟ್ಟೆ ವಿ.ವಿ.ಯ ಉಪಕುಲಪತಿ ಪ್ರೊ.ರಮಾನಂದ ಶೆಟ್ಟಿ ಮುಂಬೈ ಬಂಟರ ಸಂಘದ ಅಧ್ಯಕ್ಷ ವಿಶ್ವನಾಥ ಶೆಟ್ಟಿ,ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಉಪಸ್ಥಿತರಿದ್ದರು. ರಿತೇಶ್ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ: ಆಳ್ವಾಸ್ ವಿರಾಸತ್-2015ಕ್ಕೆ ಪೂರಕವಾಗಿ ವಿದ್ಯಾಗಿರಿಯಲ್ಲಿ 10 ದಿನಗಳ ಕಾಲ ನಡೆದ ಆಳ್ವಾಸ್ ವರ್ಣವಿರಾಸತ್-2015 ರಾಷ್ಟ್ರೀಯ ಚಿತ್ರಕಲಾಶಿಬಿರ ಭಾನುವಾರ ಸಂಪನ್ನಗೊಂಡಿತು.
ವಿದ್ಯಾಗಿರಿ ರತ್ನಾಕರವರ್ಣಿ ವೇದಿಕೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮೂಡುಬಿದರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀವರ್ಚನ ನೀಡಿದದರು. ಐತಿಹಾಸಿಕವಾಗಿ ಗುರುತಿಸಿಕೊಂಡ ಪ್ರಾಚೀನ ನಗರಿ ಮೂಡುಬಿದರೆಯಲ್ಲಿ ಕಲಾಜಗತ್ತು ಅನಾವರಣಗೊಳ್ಳುತ್ತಿರುವುದು ಇಲ್ಲಿನ ಕಲಾಶ್ರೀಮಂತಿಕೆಗೆ ಸಾಕ್ಷಿ. ಕಲಾವಿದನಲ್ಲಿರುವ ವಿಶೇಷ ಪ್ರತಿಭೆ, ಆತನ ಚಿಂತನೆ, ಸಾಮಾಜಿಕ ಕಳಕಳಿಗಳನ್ನು ವ್ಯಕ್ತಪಡಿಸಲು ಚಿತ್ರಕಲೆ ಬಹುದೊಡ್ಡ ಮಾಧ್ಯಮ. ಜಗತ್ತನೇ ಕುಂಚದ ಮೂಲಕ ತೋರಿಸಲು ಕಲಾವಿದನಿಂದ ಸಾಧ್ಯ. ಕಲಾವಿದರು ಸಮಾಜದ ಕೆಡುಕುಗಳನ್ನೇ ಚಿತ್ರದಲ್ಲಿ ತೋರಿಸುವುದಲ್ಲ. ಇಲ್ಲಿರುವ ಸಮೃದ್ಧತೆ, ಸಕರಾತ್ಮಕ ಅಂಶಗಳನ್ನೂ ಚಿತ್ರಿಸಬೇಕೆಂದರು.
ಬೆಂಗಳೂರಿನ ಹಿರಿಯ ಕಲಾವಿಮರ್ಶಕ ಗಿರಿಧರ್ ಖಾಸ್ನಿಸ್ ಮುಖ್ಯ ಅತಿಥಿಯಾಗಿ ಮಾತನಾಡಿ, ಕಲಾವಿದನಿಗೆ ಸಾಮಾಜಿಕ ಬದ್ಧತೆ ಮುಖ್ಯ. ಸಮಾಜಮುಖಿ ಚಿಂತನೆಗಳೊಂದಿಗೆ ಮಾನವೀಯತೆಯೂ ಕಲಾವಿದನಲ್ಲಿರಬೇಕು ಎಂದರು.
ಚಿತ್ರಕಲಾಶಿಬಿರದಲ್ಲಿ ಭಾಗವಹಿಸಿದ ಅದಿವಾಸಿ ಹಾಗೂ ಸಮಕಾಲೀನ ಚಿತ್ರಕಲಾವಿದರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಹಾಸನದ ಬಿ.ಎಸ್.ದೇಸಾಯಿ ಶಿಬಿರದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಗುಜರಾತಿನ ಅದಿವಾಸಿ ಚಿತ್ರಕಲಾವಿದೆ ತೇಜುಬೆನ್ ಬುಡಕಟ್ಟು ಜನಾಂಗದ ಜಾನಪದ ಹಾಡು ಹಾಡಿದರು.
ಆಳ್ವಾಸ್ ವರ್ಣವಿರಾಸತ್ ಚಿತ್ರಕಲಾಶಿಬಿರ ಸಂಘಟಕ ಡಾ.ಎಂ.ಮೋಹನ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ವರ್ಣವಿರಾಸತ್ ಸಲಹಾ ಸಮಿತಿಯ ಕೋಟಿ ಪ್ರಸಾದ್ ಆಳ್ವ, ಗಣೇಶ್ ಸೋಮಯಾಜಿ ಉಪಸ್ಥಿತರಿದ್ದರು. ಶಾರ್ವರಿ ಕಾರ್ಯಕ್ರಮ ನಿರ್ವಹಿಸಿದರು.
mbd_jan11_1

By Suddi9

Leave a Reply

Your email address will not be published. Required fields are marked *