ಪುತ್ತೂರು: ನಿಮಗೆ ಕೆಲಸ ಸಿಗ್ತಾ ಇಲ್ವಾ, ಇಂಟರ್ವ್ಯೂ ಹೋಗಿ ಸಾಕಾಯ್ತಾ… ಹಾಗಿದ್ರೆ ಉಗ್ರ ಸಂಘಟನೆ ಐಸಿಸ್ ಸೇರ್ಕೊಳ್ಳಿ… ಹೀಗಂತ ರಸ್ತೆ, ತಂತಿಕಂಬ ಎಲ್ಲೆಂದರಲ್ಲಿ ಕೆಲಸವಿಲ್ಲದ ಅಬ್ಬೇಪಾರಿಗಳು ಬರೆದಿರುವ ಘಟನೆ ಸ್ಥಳಿಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಚಾಕ್ ಪೀಸ್ ಬಳಸಿ ರಸ್ತೆಯಲ್ಲಿ ಮತ್ತು ಮೋರಿಯಲ್ಲಿ ಐಸಿಐಎಸ್ ಉಗ್ರ ಸಂಘಟನೆಗೆ ಸೇರಿಸಿ ಎಂಬ ಪ್ರಚೋದನೆ ನೀಡುವ ಹಾಗೂ ವಿವೇಕಾನಂದರ ಬಗ್ಗೆ ಅವಹೇಳನಕಾರಿಯಾಗಿ ಬರೆದಿರುವ ಪ್ರಕರಣವೊಂದು ಗುರುವಾರ ಪುತ್ತೂರು ಕಾಲೇಜೊಂದರ ಬಳಿಯಲ್ಲಿನ ಒಳ ರಸ್ತೆಯಲ್ಲಿ ಕಂಡು ಬಂದಿದೆ. ಇಲ್ಲಿನ ಕಾಲೇಜ್‍ಗೆ ತೆರಳುವ ಒಳ ರಸ್ತೆಯಲ್ಲಿ ಈ ಬರಹಗಳು ಪತ್ತೆಯಾಗಿದೆ. ಕಾಲೇಜಿನಲ್ಲಿ ಸುವರ್ಣ ಮಹೋತ್ಸವ ಸಂಭ್ರಮ ಕಾರ್ಯಕ್ರಮ ನಡೆಯುತ್ತಿದ್ದು ಈ ವೇಳೆಯೇ ಅವರ ಕುರಿತು ಅಶ್ಲೀಲ ಬರಹಗಳು ಕಂಡು ಬಂದಿದ್ದು ಹಲವು ಶಂಕೆಗೆ ಕಾರಣವಾಗಿದೆ.

putur2

vivekanand clg (1)

vivekanand clg (2)

vivekanand clg (3)

vivekanand clg (4)

vivekanand clg (5)

vivekanand clg (6)

 

putur
ನೆಹರೂನಗರದಿಂದ ಸುಮಾರು 1 ಕಿಲೋ ಮೀಟರ್ ದೂರವಿರುವ ಖಾಸಗಿ ಎಂಜಿನೀಯರಿಂಗ್ ಕಾಲೇಜಿನಿಂದ ಮುಂದೆ ಸಾಗುವ ಪಡ್ಡಾಯೂರು ರಸ್ತೆ, ಮೋರಿಯಲ್ಲಿ ಚಾಕ್ ಪೀಸ್‍ನಿಂದ ಬರೆಯಲಾಗಿದೆ. `ಕ್ಯಾಂಪಸ್ ಇಂಟರ್‍ವ್ಯೆನಲ್ಲಿ ಕೆಲಸ ಸಿಗದೇ ಹೋದರೆ ಐಸಿಸ್ (ಐಎಸ್‍ಐಎಸ್) ಸೇರಿಕೊಳ್ಳಿ ಮತ್ತು ಇಂಟರ್‍ವ್ಯೆ ನಡೆಸಿದ ಕಂಪೆನಿಗಳನ್ನು ನಾಶ ಮಾಡಿ’ ಎಂಬ ಇಂಗ್ಲೀಷ್ ಬರಹ ಮೋರಿಯಲ್ಲಿದೆ. ಇನ್ನೊಂದೆಡೆ `ಜಾಯ್ನೊ ಐಸಿಸ್’, ಮತ್ತೊಂದೆಡೆ ಇಲ್ಲಿನ ಗರ್ಲ್ಸ್ ಹಾಸ್ಟೆಲ್ ಈಸ್ ಎ ವೇಶ್ಯಾವಾಟಿಕೆ ಅಡ್ಡೆ ಎಂಬ ಬರಹಗಳು ಮತ್ತು ವಿವೇಕಾನಂದ ಬಗ್ಗೆಯೂ ಅವಹೇಳನವಾಗಿ ಬರೆಯಲಾಗಿದ್ದು, ಹಲವು ಶಂಕೆಗಳಿಗೆ ಕಾರಣವಾಗಿದೆ. ಇಲ್ಲಿನ ಕಾಲೇಜು ವಠಾರದಲ್ಲಿ ಕಾಲೇಜ್‍ನ ಸುವರ್ಣ ಮಹೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ಐದು ದಿನಗಳ ತನಕ ನಡೆಯುವ ಕಾರ್ಯಕ್ರಮಗಳಲ್ಲಿ ಎರಡು ದಿನಗಳಷ್ಟೇ ಪೂರ್ಣಗೊಂಡಿವೆ. ರವಿವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಕಾಲೇಜಿಗೆ ಬರಲಿರುವುದರಿಂದ ಭದ್ರತೆಯ ಆತಂಕವೂ ಸ್ಥಳೀಯರಲ್ಲಿ ಎದುರಾಗಿದೆ.
ಘಟನೆಯ ಕುರಿತು ಸ್ಥಳೀಯರು ಪೆÇಲೀಸರಿಗೆ ದೂರು ನೀಡಿದ್ದು, ಪೆÇಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಕಾಲೇಜಿನ ಬಗ್ಗೆ ಜನರಿಗೆ ಕೆಟ್ಟ ಭಾವನೆಹೊಂದಲಿ ಎಂಬ ಉದ್ದೇಶದಿಂದ ಈ ಬರಹ ಬರೆದದ್ದೋ ಅಥವಾ ಅನ್ಯಕೋಮಿನ ವ್ಯಕ್ತಿಗಳ ಗೂಬೆ ಕೂರಿಸುವ ಉದ್ದೇಶದಿಂದ ಈ ಬರಹವನ್ನು ಬರೆದದ್ದೋ ಎಂಬುದು ಪೆÇಲೀಸ್ ತನಿಖೆಯಿಂದ ಬಹಿರಂಗವಾಗಬೇಕಿದೆ. ಸ್ವಾಮಿ ವಿವೇಕಾನಂದ ಬಗ್ಗೆ ಎಲ್ಲಾ ಧರ್ಮಿಯರಿಗೂ ಅಭಿಮಾನ ಗೌರವ ಇದ್ದು ಅವರನ್ನು ಅಪಮಾನಿಸುವ ರೀತಿಯಲ್ಲಿ ಮಾಡಿದ ಕೃತ್ಯವನ್ನು ಸಾರ್ವಜನಿಕರು ಖಂಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *