ಮಂಗಳೂರು: ಮುಂಬೈ ಸರಕುಸಾಗಾಟಗಾರ ಉದ್ಯಮಿ ರಾಜೇಶ್ ಪ್ರಭು ಎಂಬವರ ಮೋರ್ಗನ್ಸ್ಗೇಟ್ ಮನೆಯ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ ಘಟನೆ ಇಂದು ಮುಂಜಾನೆ ನಡೆದಿದೆ. ಇದರಿಂದಾಗಿ ಅವರ ಮನೆಯ ಕಿಟಕಿ ಹಾಗೂ ಊಟದ ಕೋಣೆಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಮನೆ ಮುಂದೆ ಸಿಸಿಟಿವಿ ಅಳವಡಿಸಿರುವುದರಿಂದ ದುಷ್ಕರ್ಮಿಗಳ ಸುಳಿವು ಸಿಗುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ. ವೈಯಕ್ತಿಕ ಹಗೆಯಿಂದ ಈ ರೀತಿ ಕಲ್ಲು ತೂರಾಟ ನಡೆಸಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.



