ಸುರತ್ಕಲ್: ಸುರತ್ಕಲ್‍ನ ಎಂ.ಆರ್.ಪಿ.ಎಲ್ ಘಟಕದಲ್ಲಿರುವ ಕಂಪೆನಿಯ ಗುತ್ತಿಗೆದಾರ ಕಾರ್ಮಿಕರಿಗೆ ಆಹಾರ ಪೂರೈಸುವ ಕ್ಯಾಂಟೀನ್‍ನ ಪಲಾವ್ ಪೊಟ್ಟಣದಲ್ಲಿ ಸಾಮಾನ್ಯ ಗಾತ್ರದ ಕಪ್ಪೆಯೊಂದು ಸಿಕ್ಕಿದೆ.
ಕಾರ್ಮಿಕರು ಊಟ ಮಾಡಲೆಂದು ಈ ಕ್ಯಾಂಟೀನ್‍ಗೆ ಬರುತ್ತಿದ್ದರು. ಕ್ಯಾಂಟೀನ್ ನೀಡಿದ ಪಲಾವ್ ಪೊಟ್ಟಣವನ್ನು ಬಿಚ್ಚಿದಾಗ ಅದರಲ್ಲಿ ಕಂಡುಬಂದ ಕಪ್ಪೆಯನ್ನು ಕಂಡು ಕಾರ್ಮಿಕರು ದಿಗಿಲುಗೊಂಡಿದ್ದರು. `ಈ ಹಿಂದೆಯೂ ಈ ಕ್ಯಾಂಟೀನ್ ಪೂರೈಸುವ ಆಹಾರದಲ್ಲಿ ಇಂಥದ್ದೇ ಕೊಳೆತ ವಸ್ತುಗಳು ಸಿಕ್ಕಿವೆ, ಕ್ಯಾಂಟೀನ್‍ಲ್ಲಿ ಸ್ವಚ್ಛತೆ ಇಲ್ಲ. ಈ ಬಗ್ಗೆ ಆಹಾರ ಇಲಾಖೆಗೆ ದೂರು ನೀಡಿದರೂ ಪ್ರಯೋಜನ ಆಗಿಲ್ಲ’ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಈ ಬಗ್ಗೆ ಕಾರ್ಮಿಕರು ಕಂಪೆನಿ ಹಾಗೂ ಆಹಾರ ಇಲಾಖೆಗೆ ದೂರು ನೀಡಿದ್ದಾರೆ.
