ಸುರತ್ಕಲ್: ಬೈಕ್ ಸ್ಕಿಡ್ ಆಗಿ ಯುವಕರಿಬ್ಬರು ಮೃತಪಟ್ಟ ಘಟನೆ ಸುರತ್ಕಲ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಸಮೀಪದ ಅಗರಮೇಲು ಎಂಬಲ್ಲಿ ಭಾನುವಾರ ಬೆಳಖಿಗ್ಗೆ 2ರ ಸುಮಾರಿಗೆ ನಡೆದಿದೆ. ಕೃಷ್ಣಾಪುರ ಏಳನೇ ಬ್ಲಾಕ್ ನಿವಾಸಿಗಳಳಾದ ನಿಕಲಗ ರಾಜ್(22) ಹಾಗೂ ದೀಪಕ್ ಮೃತ ದುರ್ದೈವಿಗಳು.

ಸವಾರರು ವೇಗವಾಗಿ ಸಂಚರಿಸುತ್ತಿದ್ದ ಪರಿಣಾಮ ಬೈಕ್ ಸ್ಕಿಡ್ ಆಗಿ ಚಿಮ್ಮಿದ್ದ ಯುವಕರಿಬ್ಬರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆನ್ನಲಾಗಿದೆ. ಇಂದು ಐದರ ಸುಮಾರಿಗೆ ಘಟನೆ ಬೆಳಕಿಗೆ ಬಂದಿದ್ದು ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

